Jp story : ಇತ್ತೀಚೆಗೆ ಶಿವಮೊಗ್ಗದ ಜ್ಯೋತಿ ನಗರದಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಮತ್ತೆ ನಗರದಲ್ಲಿ ಆ್ಯಕ್ಟೀವ್ ಆಗಿದೆಯಾ ಎಂಬ ಅನುಮಾನ ನಿಜವಾಗಿದೆ. ಕಳೆದ ರಾತ್ರಿ ಐದು ಮಂದಿ ಚಡ್ಡಿ ಹಾಕಿಕೊಂಡು ಮನೆಯ ಕಿಟಕಿ ಮೂಲಕ ಮನೆ ಪ್ರವೇಶ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಐದು ಮಂದಿಯಲ್ಲಿ ನಾಲ್ಕು ಮಂದಿಯ ಮುಖಛರ್ಯೆ ಸೃಷ್ಟವಾಗಿ ಕಾಣಸಿಗುತ್ತದೆ. ಚಡ್ಡಿ ಸೊಂಟಕ್ಕೆ ಟವಲ್ ಕಟ್ಟಿಕೊಂಡಿದ್ದ ತಂಡ ವಿದ್ಯಾ ನಗರದ ಚಾನಲ್ ಏರಿಯಾದ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದೆ.ಚಾನಲ್ ರಸ್ತೆಯಲ್ಲಿರುವ ಜಾನ್ ಎಂಬುವರ ಮನೆಗೆ ಐದು ಮಂದಿಯ ತಂಡ ಬಂದಿದೆ. ಮೊದಲು ಕಿಟಕಿಯ ಮೂಲಕ ಎಲ್ಲರೂ ಮನೆಯನ್ನು ಪ್ರವೇಶಿಸಿದ್ದಾರೆ. ಕೇವಲ ಒಂದು ಕೋಣೆಯಲ್ಲಿ ಸಂಪೂರ್ಣ ತಲಾಶ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದ ರೂಂ ನಲ್ಲಿ ಜಾನ್ ಹಾಗು ಪತ್ನಿ ಮಲಗಿದ್ದರೆ, ಮತ್ತೊಂದು ಕೋಣೆಯಲ್ಲಿ ಜಾನ್ ಪುತ್ರ ಮಲಗಿದ್ದಾನೆ. ಚಡ್ಡಿ ಗ್ಯಾಂಗ್ ಮಲಗಿದ್ದ ಕೋಣೆಗೆ ಪ್ರವೇಶಿಸಿಲ್ಲ. ಕೇವಲ ಒಂದು ಕೋಣೆಯಲ್ಲಿ ಎಲ್ಲವನ್ನು ಜಾಲಾಡಿದ್ದಾರೆ. ಚಡ್ಡಿ ಗ್ಯಾಂಗ್ ಗೆ ಏನು ಸಿಕ್ಕಂತೆ ಕಂಡಿಲ್ಲ.

Jp story : ಅದೃಷ್ಟವಶಾತ್ ಕುಟುಂಬಸ್ಥರು ಪಾರು.
ಚಡ್ಡಿಗ್ಯಾಂಗ್ ಮನೆ ಪ್ರವೇಶಿದ ವಿಚಾರ ಗೊತ್ತಾಗಿ ಮನೆಯಲ್ಲಿದ್ದವರು ಪ್ರತಿರೋಧ ತೋರಲು ಮುಂದಾಗಿದ್ದರೂ, ಜೀವಕ್ಕೆ ಸಂಚಕಾರ ಇರುತ್ತಿತ್ತು. ಆದರೆ ಕಳ್ಳರು ಮನೆಯಲ್ಲಿ ಕೈಚಳಕ ತೋರಿಸುವಾಗ ಜಾನ್ ಕುಟುಂಬ ಸಂಪೂರ್ಣ ನಿದ್ದೆಗೆ ಜಾರಿತ್ತು. ಇದೇ ಅವರಿಗೆ ವರದಾನವಾಗಿದೆ.ಕಳ್ಳರೂ ಕೂಡ ಮನೆಯಲ್ಲಿ ಮಲಗಿದ್ದವರ ಕೋಣೆಯನ್ನು ಪ್ರವೇಶಿಸದೆ ಹಾಗೆ ಮುಂಬಾಗಿಲಿನ ಮೂಲಕ ಹೊರ ಸಾಗಿದ್ದಾರೆ. ರಾತ್ರಿ 2.25 ಗಂಟೆಯಿಂದ 3.48 ರವರೆಗೆ ಚಡ್ಡಿಗ್ಯಾಂಗ್ ಜಾನ್ ಮನೆಯ ಕೋಣೆಯಲ್ಲಿ ಶೋಧ ನಡೆಸಿರುವುದು ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆಯಾಗಿದೆ. ಬೆಳಿಗ್ಗೆ ಎದ್ದಾಗಲೇ ಜಾನ್ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಗದು ಬಂಗಾರ ಕಳುವಾಗಿರುವ ಬಗ್ಗೆ ಜಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

