caste census : ಬಿಜೆಪಿಯವರು ಮತ್ತೊಮ್ಮೆ ನಮ್ಮ ಯೋಜನೆಯನ್ನು ಕಾಪಿ ಹೊಡೆದಿದ್ದಾರೆ | ಮಧು ಬಂಗಾರಪ್ಪ

prathapa thirthahalli
Prathapa thirthahalli - content producer

caste census : ಬಿಜೆಪಿಯವರು ಈ ಹಿಂದೆ ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಯನ್ನು ಕಾಪಿ  ಹೊಡೆದಿದ್ದರು, ಈಗ ನಾವು ಜಾರಿಗೆ ತಂದಿರುವ ಜಾತಿಗಣತಿಯನ್ನೂ ಸಹ ಕಾಪಿ ಹೊಡೆದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು. 

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಜಾತಿ ಜನಗಣತಿ ಹಾಗೂ ಜನ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಹಿಂದೆ ಬಿಜೆಪಿಯುವರು ಜಾತಿಗಣತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ನಮ್ಮ ಸರ್ಕಾರ ಹಾಗೆ ಮಾಡುವುದಿಲ್ಲ. ಒಳ್ಳೆಯ ವಿಚಾರಗಳಿಗೆ ವಿರೋಧ ಪಕ್ಷದಲ್ಲಿದ್ದರು  ಸಹ ಸಹಕಾರ ನೀಡಬೇಕು. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು. 

- Advertisement -

54 ಅಂಶಗಳನ್ನು ಇಟ್ಟುಕೊಂಡು ರಾಜ್ಯದಲ್ಲಿ ಜಾತಿಗಣತಿಯನ್ನು ಮಾಡಲಾಗಿದೆ. ನಾವು ಕೊಟ್ಟ ವರದಿ ಸರಿಯಿಲ್ಲ ಎಂದರೆ ಮತ್ತೊಮ್ಮೆ  ಜಾತಿಗಣತಿ ಮಾಡೋಣ. ಈ ಹಿಂದೆ  ಬಿಜೆಪಿಯವರು ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಯನ್ನು  ಕಾಪಿ ಹೊಡೆದಿದ್ದರು, ಈಗ ನಾವು ಯೋಚಿಸಿದ್ದ ಜಾತಿಗಣತಿಯನ್ನೂ ಸಹ ಕಾಪಿ ಹೊಡೆದಿದ್ದಾರೆ. ಅದಕ್ಕೆ ನಾನು ಸ್ವಾಗತ ಕೋರುತ್ತೇನೆ ಎಂದರು. 

caste census : ಯೋಧರ ನೇಮಕಾತಿ ಮಾಡಿಲ್ಲ ಎಂದರೆ ದೇಶವನ್ನು ಯಾರು ಕಾಯುತ್ತಾರೆ

ಕಳೆದ ಎರಡು ವರ್ಷದಿಂದ ದೇಶ ಕಾಯುವ ಸೈನಿಕರ ನೇಮಕಾತಿ ಆಗಲಿಲ್ಲ. ಹಾಗಾಗಿ ಕಾಶ್ಮೀರದಲ್ಲಿ ನಡೆದ ದಾಳಿಯ ಎರಡು ಗಂಟೆಯ ನಂತರ ಅಲ್ಲಿಗೆ ಸೈನಿಕರು ಬಂದಿದ್ದು. ಯೋಧರ ನೇಮಕಾತಿ ಮಾಡಿಲ್ಲ ಎಂದರೆ ನಮ್ಮ ದೇಶವನ್ನು ಯಾರು ಕಾಯುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದರು. 

ಗಾಂಧಿಜೀ ಹುಟ್ಟಿದ ದೇಶದಲ್ಲಿ ಮೊದಲು ಶಾಂತಿಯಿಂದಲೇ ಹೋರಾಟ ಮಾಡಬೇಕು ಶಾಂತಿಗೆ ಬಗ್ಗದೇ ಇದ್ದಾಗ ಇಂದಿರಾ ಗಾಂಧಿಯವರ ತರಹ ಯುದ್ದ ಮಾಡಬೇಕು ಎಂದರು.

 

TAGGED:
Share This Article
Leave a Comment

Leave a Reply

Your email address will not be published. Required fields are marked *