ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದ ಪರಿಣಾಮ, ಕಾರಿನಲ್ಲಿದ್ದ ವೃದ್ಧೆಯೊಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್ ಪೇಟೆ ಪಟ್ಟಣದ ಚಿಪ್ಪಿಗರ ಕೆರೆ ಏರಿ ಬಳಿ ನಡೆದಿದೆ.
ತ್ಯಾಗರ್ತಿಯ ಹುಚ್ಚಪ್ಪ ಅವರ ಪತ್ನಿ ಪಾರ್ವತಮ್ಮ (65) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತ್ಯಾಗರ್ತಿಯಿಂದ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಾರುತಿ ಸ್ವಿಫ್ಟ್ ಕಾರು ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕೆರೆಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಸಾರ್ವಜನಿಕರು ತಕ್ಷಣವೇ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪಾರ್ವತಮ್ಮ ಅವರು ಸಾವನ್ನಪ್ಪಿದ್ದರು.