Call for Justice Shivamogga Flood Victims Protest ಶರಾವತಿ, ಭದ್ರಾ, ತುಂಗಾ ಸಂತ್ರಸ್ತರ ಅಸಮಾಧಾನ: ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಕರೆ
Call for Justice Shivamogga Flood Victims Protest ಶಿವಮೊಗ್ಗ, ಜುಲೈ 12: ಮಲೆನಾಡು ರೈತ ಹೋರಾಟ ಸಮಿತಿಯು ಶರಾವತಿ, ಭದ್ರಾ, ತುಂಗಾ ಮತ್ತು ಅಂಬ್ಲಿಗೋಳ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವೈಫಲ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಯಲ್ಲಿ ಆಗಿರುವ ವಿಳಂಬ ಮತ್ತು ಹಾಲಿ ಇರುವ ಹಕ್ಕುಪತ್ರಗಳ ರದ್ದತಿಗೆ ಸಂಬಂಧಿಸಿದಂತೆ ಮಳೆಗಾಲದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಸಮಿತಿ ಘೋಷಿಸಿದೆ.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀನಾ ಶ್ರೀನಿವಾಸ್, “ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸಬೇಕಾದವರು ಒಪ್ಪಂದ ಮಾಡಿಕೊಂಡು ಮೌನಕ್ಕೆ ಜಾರಿದ್ದಾರೆ” ಎಂದು ಆರೋಪಿಸಿದರು. ಜಿಲ್ಲೆಯ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಈ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.

Call for Justice Shivamogga Flood Victims Protest
1962ರಲ್ಲಿ ಕಂದಾಯ ಇಲಾಖೆ ಮುಳುಗಡೆ ಸಂತ್ರಸ್ತರಿಗೆ ನೀಡಿದ್ದ ಹಕ್ಕುಪತ್ರಗಳನ್ನು ವಜಾ ಮಾಡಿ ನೋಟಿಸ್ ನೀಡುತ್ತಿರುವುದರಿಂದ, ಸಂತ್ರಸ್ತರು ಉಪವಿಭಾಗಾಧಿಕಾರಿ ಕಚೇರಿಯಲ್ಲೇ ಪ್ರಕರಣಗಳನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. “ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕದನದಲ್ಲಿ ಮೈಮರೆತಿದೆ. ಮಾಜಿ ಸಿಎಂ ಅವರಿಗೆ ಸೇರಿದ ಕಾಲೇಜನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಲು ಅಧಿಸೂಚನೆ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶರಾವತಿ ಸಂತ್ರಸ್ತರ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ” ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
Call for Justice Shivamogga Flood Victims Protest
ಶರಾವತಿ ಸಮಸ್ಯೆ ಬಗೆಹರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಅವಕಾಶ ನೀಡಿದ್ದರೂ, ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕಾರಣ ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು. “ಸಂಸದರು, ಸಚಿವರು ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಮ್ಮೆಯೂ ಮುಳುಗಡೆ ಸಂತ್ರಸ್ತರ ಪರ ಮಾತನಾಡಿಲ್ಲ” ಎಂದು ಟೀಕಾಪ್ರಹಾರ ನಡೆಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ /Call for Justice Shivamogga Flood Victims Protest
ಕೇಂದ್ರದ ಬಿಜೆಪಿ ಸರ್ಕಾರ ಮೊದಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ನೀಡಲಿಲ್ಲ, ಆದರೆ ಈಗ ಅದಕ್ಕೆ ಅನುಮತಿ ನೀಡಿ ರಾಜ್ಯ ಸರ್ಕಾರದೊಂದಿಗೆ ಸೇರಿ ಹಣ “ಹೊಡೆಯಲು ಮುಂದಾಗಿದ್ದಾರೆ” ಎಂದು ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು. “ಈ ಯೋಜನೆಗೆ ಸಾವಿರಾರು ಮರಗಳು ಬಲಿಯಾಗಲಿವೆ. ಕುಣಬಿ ಸಮುದಾಯದ 15 ಜನ ಭೂಸ್ವಾಧೀನಕ್ಕೆ ಒಪ್ಪಿದ್ದಾರೆ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇವರಿಗೆ ಹಣ ಹೊಡೆಯಲು ಆಗಬೇಕು ಅಷ್ಟೆ, ರೈತರ ಸಮಸ್ಯೆಗಳು ಬೇಡವಾಗಿವೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದರೆ ತಕ್ಷಣ ಪ್ರತಿಕ್ರಿಯೆ ಬರುತ್ತದೆ, ಆದರೆ ರಾಜ್ಯ ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ ಪತ್ರ ಬರೆದರೆ ಪ್ರತಿಕ್ರಿಯೆ ಬರಲು ತಿಂಗಳು ಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Call for Justice Shivamogga Flood Victims Protest
Flood victims in Shivamogga, particularly from Sharavathi, Bhadra, Tunga, and Ambligola projects, accuse the government and elected representatives of failing to resolve their land and hakku patra issues.
A major protest is planned, ಶಿವಮೊಗ್ಗ, ಮುಳುಗಡೆ ಸಂತ್ರಸ್ತರು, ಶರಾವತಿ, ಭದ್ರಾ, ತುಂಗಾ, ಅಂಬ್ಲಿಗೋಳ, ಹಕ್ಕುಪತ್ರ, ರೈತ ಹೋರಾಟ, ತೀನಾ ಶ್ರೀನಿವಾಸ್, ಬಿ.ವೈ. ರಾಘವೇಂದ್ರ, ಮಧು ಬಂಗಾರಪ್ಪ, ಬಿಜೆಪಿ, ಕಾಂಗ್ರೆಸ್, ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, Shivamogga, flood victims, displacement, Sharavathi, Bhadra, Tunga, Ambligola, land rights, Hakku Patra, farmers’ protest, Teena Srinivas, B.Y. Raghavendra, Madhu Bangarappa, BJP, Congress, Siddaramaiah, B.Y. Vijayendra, Sharavathi Pumped Storage Project, #Shivamogga #FloodVictims #KarnatakaPolitics #FarmersProtest #Sharavathi #HakkuPatra #LandRights #ShivmoggaNew