ಸಹೋದರನನ್ನೆ ಕೊಂದ ಸೋದರ! ವಿನೋಬನಗರ PS ಲಿಮಿಟ್ಸ್​ ನಲ್ಲಿ ನಡೆದಿದ್ದೇನು?

ajjimane ganesh

Brother Kills Brother in Shivamogga ಶಿವಮೊಗ್ಗ, malenadu today news : August 21 2025 : ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊಲೆ ಘಟನೆ ವರದಿಯಾಗಿದೆ. ನಿನ್ನೆದಿನ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಎಫ್​ಐಆರ್ ದಾಖಲಾಗಿದ್ದು ಆರೋಪಿ ಸಹ ಪೊಲೀಸ್ ವಶದಲ್ಲಿದ್ದಾನೆ.

ಸಾಗರ, ಶಿವಮೊಗ್ಗ, ರಿಪ್ಪನ್​ಪೇಟೆ, ತೀರ್ಥಹಳ್ಳಿಯಲ್ಲಿ ಏನೆಲ್ಲಾ ನಡೀತು! ಬಾವಿಯಲ್ಲಿ ಯುವಕನ ದೇಹ!? ನಡೆದಿದ್ದೇನು? https://malenadutoday.com/sagar-shivamogga-ripponpet-thirthahalli-news-21/ 

Brother Kills Brother in Shivamogga
Brother Kills Brother in Shivamogga

ನಡೆದಿದ್ದೇನು?

ಶಿವಮೊಗ್ಗ ನಗರದ ಎಪಿಎಂಸಿ ಬಳಿಯ ಲೇಔಟ್ ಒಂದರಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಜನಾರ್ದನ ನಾಯ್ಕ್ ಎಂಬಾತ ಸಾವನ್ನಪ್ಪಿದ್ದಾನೆ. ಈತನ ದೊಡ್ಡಪ್ಪನ ಮಗ ಹನುಮಂತ ನಾಯ್ಕ್​ನೇ ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರ ನಡುವೆ ನಡೆದ ಜಗಳದಲ್ಲಿ ಹನುಮಂತ ಜಗದೀಶನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. 

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

ಜಗದೀಶ ಹಾಗೂ ಹನುಮಂತ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಇವರಿಬ್ಬರ ನಡುವೆ ಈ ಹಿಂದೆ ಒಂದು ತಗಾದೆಯಾಗಿತ್ತು.ಅಪಘಾತ ಘಟನೆಯಲ್ಲಿ ಹನುಮಂತನಿಗೆ ಪ್ಯಾಕ್ಷರ್​ ಆಗಿತ್ತು. ಅದರ ಆಸ್ಪತ್ರೆಯ ಖರ್ಚು ಜಗದೀಶ್​ ನೀಡಿಲ್ಲ ಎಂಬುದು ಆರೋಪ. ಮೇಲಾಗಿ ಅಪಘಾತದಲ್ಲಾದ ಊನದ ಬಗ್ಗೆ ಹನುಮಂತನನ್ನು ಜಗದೀಶ್ ಆಡಿಕೊಳ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗಳವಾಗಿ ಹನುಮಂತ ಜಗದೀಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಇನ್ನಷ್ಟು ವಿಚಾರ, ತನಿಖೆಯಿಂದ ಬೆಳಕಿಗೆ ಬರಬೇಕಿದೆ. 

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

Brother Kills Brother in Shivamogga

Share This Article