ಮದುವೆಯಾಗಬೇಕಿದ್ದ ಜೋಡಿ ರಸ್ತೆ ಅಪಘಾತದಲ್ಲಿ ಸಾವು

prathapa thirthahalli
Prathapa thirthahalli - content producer

Bike accident : ಶಿಕಾರಿಪುರ: ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವಧು-ವರರು, ಅಂಬಾರಗೊಪ್ಪ ಕ್ರಾಸ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಸೊರಬ ತಾಲೂಕಿನ ಗಂಗವಳ್ಳಿ ಗ್ರಾಮದ ಸದಾಶಿವ ಮತ್ತು ಲೀಲಮ್ಮ ಅವರ ಪುತ್ರ ಬಸವನಗೌಡ (30) ಹಾಗೂ ಶಿಕಾರಿಪುರ ತಾಲೂಕಿನ ಮತ್ತೀಕೋಟೆ ಗ್ರಾಮದ ಬಸವರಾಜಪ್ಪ ಅವರ ಪುತ್ರಿ ರೇಖಾ (25) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ 8.45ರ ಸುಮಾರಿಗೆ  ಇಬ್ಬರು ಮತ್ತೀಕೋಟೆಯಿಂದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಅಂಬಾರಗೊಪ್ಪ ಕ್ರಾಸ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಮೀಪ ಎದುರಿನಿಂದ ವೇಗವಾಗಿ ಬಂದ ಇಕೋ ವಾಹನ ಇವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು, ಆದರೆ ಮದುವೆ ದಿನಾಂಕ ಇನ್ನೂ ನಿಗದಿಯಾಗಿರಲಿಲ್ಲ. ಈ ಸಂಬಂಧ ಇಕೋ ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike accident

 

Bike accident

Share This Article