SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 11, 2024 hassan news
ಅಡಿಕೆ ತೂಕದಲ್ಲಿ ಹೊಡೆಯುತ್ತಾರೆ ಅನ್ನೋ ಮಾತಿದೆ. ಅಂದರೆ ಅಡಕೆ ತೂಕ ಹಾಕುವಾಗ ತೂಕ ಕಮ್ಮಿಯಾಗುವಂತೆ ನೋಡಿಕೊಂಡು ಮೋಸ ಮಾಡುತ್ತಾರೆ ಎನ್ನಲಾಗುತ್ತದೆ. ಅದೇ ರೀತಿಯ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ಅರಹತೊಳಲಿನಲ್ಲಿ ನಡೆದಿದೆ.
ಇಲ್ಲಿಗೆ ಬಂದಿದ್ದ ಅಡಿಕೆ ವ್ಯಾಪಾರಿಯೊಬ್ಬರು ಅಡಕೆ ಖರೀದಿ ಮಾಡಿದ್ದ, ಆದರೆ ಅಡಿಕೆ ಕೊಟ್ಟವರಿಗೆ ಏನೋ ಅನುಮಾನ ಬಂದು ಆತ ಖರೀದಿಸಿದ್ದ ಅಡಕೆಯನ್ನ ಮತ್ತೊಮ್ಮೆ ತೂಕ ಕ್ಕೆ ಇಟ್ಟಿದ್ದಾರೆ. ಈ ವೇಳೆ ಅಡಕೆ ತೂಕದಲ್ಲಿ ಕ್ವಿಂಟಾಲ್‌ಗೆ ಮೂರರಿಂದ ನಾಲ್ಕು ಕೆಜಿ ವ್ಯತ್ಯಾಸ ಬಂದಿರುವುದು ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ರೈತರು, ವ್ಯಾಪಾರಿಯನ್ನ ದೇವಾಸ್ಥಾನಕ್ಕೆ ಖರಿದಿಸಿ ದಿಗ್ಬಂದನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಆ ಬಳಿಕ ಊರು ಮನೆಯ ಹಿರಿಯರು 20 ಲಕ್ಷ ರೂಪಾಯಿ ದಂಡ ವಿದಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದರು.
ಭದ್ರಾವತಿ ತಾಲ್ಲೂಕು Bhadravati taluk
ಇಲ್ಲಿನ ಅರಹತೊಳಲಿನಲ್ಲಿ (Arahatholalu Village) ಈ ಘಟನೆ ನಡೆದಿದೆ. ಇಲ್ಲಿಯು ನಿವಾಸಿಯೊಬ್ಬರ ಮನೆಗೆ ಅಡಕೆ ವ್ಯಾಪಾರಿ ಬಂದಿದ್ದರು 45 ಚೀಲ ಅಡಿಕೆ ಖರೀದಿ ಮಾಡಿದ್ದ. ಅದನ್ನ ಎರಡು ವಾಹನಗಳಿಗೆ ಲೋಡ್ ಮಾಡಲಾಗಿತ್ತು. ಈ ನಡುವೆ ಅಡಿಕೆ ಬೆಳೆಗಾರರಿಗೆ ಅನುಮಾನ ಬಂದಿದೆ. ಹಾಗಾಗಿ ಅಡಿಕೆ ಚೀಲವೊಂದನ್ನ ವಾಹನದಿಂದ ಇಳಿಸಿ ತೂಕ ಹಾಕಿದ್ದಾರೆ. ಅದರಲ್ಲಿ ಮೂರು ಕೆಜಿ ವ್ಯತ್ಯಾಸ ಬಂದಿದೆ. ಸಂಶಯ ದಟ್ಟವಾಗಿ ಹಲವು ಚೀಲಗಳನ್ನ ವಾಹನದಿಂದ ಇಳಿಸಿ ಬೇರೆಯದ್ದೆ ತೂಕದ ಮಷಿನ್‌ನಲ್ಲಿ ತೂಗಿದ್ದಾರೆ. ಆಗ ವ್ಯಾಪಾರಿ ಮೋಸ ಮಾಡಿರುವುದು ಗೊತ್ತಾಗಿದೆ.
ಈ ನಡುವೆ ದುಡ್ಡು ತರುತ್ತೇನೆ ಎಂದು ಹೋಗಿದ್ದ ವ್ಯಾಪಾರಿ ಊರಿಗೆ ಬರುತ್ತಲೆ ಆತನನ್ನ ಹಿಡಿದುಕೊಂಡ ಗ್ರಾಮಸ್ಥರು ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದ್ದಾರೆ. ಊರ ಹಿರಿಯರು ಬಂದು ಆತನಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿ ಇನ್ನುಮೇಲೆ ಅಡಕೆ ಖರೀದಿಗೆ ಬರದಂತೆ ಷರತ್ತು ಹಾಕಿದ್ದಾರೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ