SHIVAMOGGA| MALENADUTODAY NEWS | ಮಲೆನಾಡು ಟುಡೆ Mar 16, 2025
ಹೋಳಿ ಹಬ್ಬದ ಸಡಗರದ ನಡುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯ ಜೆಪಿ ನಗರದಲ್ಲಿ ಕೊಲೆಯೊಂದು ಸಂಭವಿಸಿತ್ತು. ಕಳೆದ ಗುರುವಾರ ರಾತ್ರಿ ನಡೆದ ಹೋಳಿ ಆಚರಣೆಯ ಹಿನ್ನೆಲೆಯಲ್ಲಿ ಕಾಮದಹನದ ಸಂದರ್ಭದಲ್ಲಿ ಸಣ್ಣದೊಂದು ಕಾರಣಕ್ಕೆ 46 ವರುಷದ ಬಳ್ಳಾರಿ ರಾಜು ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಪೆಟ್ಟು ತಿಂದ ಆತ ಚೇತರಿಸಿಕೊಳ್ಳಲಾಗದೇ ಸಾವನ್ನಪ್ಪಿದ್ದ.
ಮಧು ಹಾಗೂ ಮಾಲತೇಶ ಎಂಬವರು ರಾಜು ಜೊತೆಗೆ ಜಗಳವಾಡಿ ಆತನ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜು ಶುಕ್ರವಾರ ಸಾವನ್ನಪ್ಪಿದ್ದರು. ಈ ಸಂಬಂಧ ಶನಿವಾರ ಗಣೇಶ್ ಎಂಬವರು ನೀಡಿದ ದೂರಿನನ್ವಯ ಸಾಗರ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಸದ್ಯ ಆರೋಪಿಯೊಬ್ಬರನ್ನು ವಶಕ್ಕೆ ಪಡೆದಿರುವ ಮಾಹಿತಿಯಿದೆ.