SHIVAMOGGA | MALENADUTODAY NEWS | ಮಲೆನಾಡು ಟುಡೆ Feb 18, 2025
ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವರದಿಯನ್ನು ನೀಡುವ ಮಲೆನಾಡು ಟುಡೆ ಇವತ್ತಿನ ರಿಪೋರ್ಟ್ ಇಲ್ಲಿದೆ.
ಸುದ್ದಿ 1 : ಮಗು ತನ್ನದಲ್ಲವೆಂದು ಪತ್ನಿಗೆ ಹಲ್ಲೆ ಕಿರುಕುಳ
ದಾವಣಗೆರೆ ನಿವಾಸಿಯೊಬ್ಬ ತಾನು ಮದುವೆಯಾದ ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಮಹಿಳೆಯೊಬ್ಬಳಿಗೆ ಇಲ್ಲದ ಕಿರುಕುಳ ನೀಡಿದ ಹಲ್ಲೆ ಮಾಡಿದ ಆರೋಪ ಸಂಬಂಧ ಜಿಲ್ಲೆಯ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲೆಯ ತಾಲ್ಲೂಕು ಒಂದರಲ್ಲಿರುವ ಮಹಿಳೆಯ ಮನೆಗೆ ಬಂದು ಆರೋಪಿ ಪತ್ನಿಯನ್ನು ಕಾರಿನಲ್ಲಿ ಬಲವಂತವಾಗಿ ಎಳದೊಯ್ದಿದ್ದು ಮಾತ್ರವಲ್ಲದೆ, ಆಕೆಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಅದನ್ನು ತೆಗೆಸು ಎನ್ನುತ್ತಾ ಮಹಡಿಯಿಂದ ಆಕೆಯನ್ನು ಎತ್ತಿ ಬಿಸಾಕಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆದು ಸದ್ಯ ಪೊಲೀಸರ ಮೊರೆಹೋಗಿದ್ದಾರೆ.
ಸುದ್ದಿ 2 : ದೇವರ ದರ್ಶನ ಪಡೆದು ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನ ಮಾಯ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಿದರಹಳ್ಳಿಯಲ್ಲಿ ದೇವರ ದರ್ಶನ ಮುಗಿಸಿಕೊಂಡು ಮನೆಗೆ ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಸುಮಾರು ಒಂದು ಲಕ್ಷ ಮೌಲ್ಯ ಚಿನ್ನಾಭರಣ ಕಳುವು ಮಾಡಿರುವ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಹಾವೇರಿ ಜಿಲ್ಲೆ ಬ್ಯಾಡಗಿಗೆ ದೇವರ ದರ್ಶನಕ್ಕೆಂದು ತೆರಳಿದ್ದರು. ಈ ವೇಳೆ ಇತ್ತ ಅವರ ಮನೆಯಲ್ಲಿ ಹಿಂದಿನ ಬಾಗಿಲ ಚಿಲಕ ಮರಿದ ಕಳ್ಳರು, ಬೀರುವಿನಲ್ಲಿಟ್ಟಿದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಸುದ್ದಿ 3 : ಪತ್ನಿಗೆ ಚಿಕಿತ್ಸೆ ಕೊಡಿಸಿ ಬರುವಷ್ಟರಲ್ಲಿ ಚಿನ್ನ ಕದ್ದ ಕಳ್ಳರು
ಇತ್ತ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಭದ್ರಾವತಿ ತಾಲ್ಲೂಕು ಕನ್ನೆಕೊಪ್ಪದಲ್ಲಿನ ಮನೆಯೊಂದರಲ್ಲಿ ಏಳುವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. ಇಲ್ಲಿನ ನಿವಾಸಿ ಕಳೆದ ಫೆಬ್ರವರಿ ಹತ್ತಕ್ಕೆ ತಮ್ಮ ಪತ್ನಿ ಚಿಕಿತ್ಸೆ ಕೊಡಿಸುವ ಸಲುವಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಆ ಬಳಿಕ ನಾಲ್ಕು ದಿನ ಆಸ್ಪತ್ರೆಯಲ್ಲಿ ಉಳಿದಿದ್ದರು. ಆನಂತರ ಹದಿನೈದನೇ ತಾರೀಖು ತಮ್ಮ ಪತ್ನಿಯನ್ನು ಆಸ್ಪತ್ರೆಯಿಂದ ಕರೆ ತಂದ ಸಂದರ್ಭದಲ್ಲಿ ಮನೆಯ ಹಿಂಬಾಗಿಲು ಓಪನ್ ಆಗಿರುವುದು ಕಂಡುಬಂದಿದೆ. ತಕ್ಷಣವೇ ಒಳಬಂದು ಪರಿಶೀಲನೆ ನಡೆಸಿದಾಗ ಕಳ್ಳರು ಚಿನ್ನದ ಪೆಂಡೆಂಟ್, ಸರ, ಹವಳದ ಸರ, ಬಂಗಾರದ ಬಳೆ, ಉಂಗುರ ಸೇರಿದಂತೆ ಏಳುವರೆ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೂ, ಎಫ್‌ಐಆರ್ ದಾಖಲಾಗಿದೆ.
ಸುದ್ದಿ 4 : ದೊಡ್ಡಪೇಟೆ ಪೊಲೀಸ್ ಠಾಣೆ ಕೇಸ್
ಇತ್ತ ಶಿವಮೊಗ್ಗದ ಓಟಿ ರೋಡ್‌ನಲ್ಲಿ ಬಾರ್‌ವೊಂದರ ಬಳಿ ತನ್ನ ಸ್ನೇಹಿತನಿಗೆ ಮನೆಗೆ ಹೋಗು ಎಂದಿದ್ದಕ್ಕೆ ನಿನ್ಯಾರು ಅವನಿಗೆ ಮನೆಗೆ ಹೋಗು ಎಂದು ಪ್ರಶ್ನಿಸಿ ಇನ್ನೊಬ್ಬ ಹಲ್ಲೆ ಮಾಡಿದ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ, ಬೈಕ್ ಕೀಯಿಂದ ಮುಷ್ಟಿಕಟ್ಟಿ ಹೊಟ್ಟೆಗೆ ಗುದ್ದಿದ್ದರಿಂದ ಪೆಟ್ಟು ಸಹಿಸಲಾಗದೇ ಸಂತ್ರಸ್ತರು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕಳೆದ 12 ನೇ ತಾರೀಖು ಇಲ್ಲಿನ ಬಾರ್ ಮುಂದೆ ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ದೂರು ದಾಖಲಿಸಿದ್ದಾರೆ.ಕೇಸ್ ದಾಖಲಿಸಿರುವ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
ಸುದ್ದಿ 5 :ಅಂಗನವಾಡಿಯಲ್ಲಿ ತಬ್ಬಿಕೊಳ್ಳಲು ಬಂದ
ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿನ ಅಂಗನವಾಡಿಯ ಶಿಕ್ಷಕಿಯನ್ನು, ಅಡುಗೆ ಸಹಾಯಕಿಯ ಮಗ ತಬ್ಬಿಕೊಂಡು ಮಾನಭಂಗಕ್ಕೆ ಯತ್ನಿಸಿದ ಆರೋಪ ಸಂಬಂಧ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದೆ.ಈ ವೇಳೆ ಸಂತ್ರಸ್ತ ಮಹಿಳೆ ಆತನಿಂದ ತಪ್ಪಿಸಿಕೊಂಡು ಹೊರಕ್ಕೆ ಓಡಿ ಬಂದಿದ್ದಾಳೆ. ಈ ವೇಳೆ ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ, ದೂರು ಕೊಟ್ಟರೆ ಹುಷಾರ್ ಎಂದು ಬೆದರಿಸಿ ಹೋಗಿರುವುದಾಗಿ ದೂರು ದಾಖಲಾಗಿದೆ.
SUMMARY | shivamogga crime news today
KEY WORDS | shivamogga crime news today