SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 21, 2025
ಶಿವಮೊಗ್ಗ | ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಿಂದ ಜನವರಿ 23 ರಂದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್.ವಿ. ಗುರುರಾಜ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನದ ವಜ್ರ ಮಹೋತ್ಸವ ಮತ್ತು ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ, ರಾಷ್ಟ್ರೀಯ ಯುವ ದಿನದ ಅಂಗವಾಗಿ ಶಿವಮೊಗ್ಗ ಶರಾವತಿ ನಗರದ ಶ್ರೀಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ರಾಜ್ಯಾಡಳಿತ ಮತ್ತು ಸಂವಿಧಾನ, ಇತಿಹಾಸ ಮತ್ತು ಭೂಗೋಳ ಶಾಸ್ತ್ರ, ವಿಜ್ಞಾನ ತಂತ್ರಜ್ಞಾನ, ಕ್ರೀಡೆ ಮನರಂಜನೆ ಹಾಗೂ ಪ್ರಚಲಿತ ವಿದ್ಯಮಾನಗಳ ವಿಷಯ ಕುರಿತಂತೆ ಇರಲಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತರಿರುವರು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಯವರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಉಪ ನಿರ್ದೇಶಕರಾದ ಮಂಜುನಾಥ್ ಎಸ್. ಆರ್., ಪದವಿಪೂರ್ವ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಪ್ಪ ಎಸ್. ಗುಂಡಪಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಸೇರಿದಂತೆ ಪ್ರಮುಕರು ಭಾಗವಹಿಸುವು ಎಂದರು
ಇದರ ಪ್ರವೇಶ ಪ್ರಕ್ರಿಯೆ ಹೇಗೆಂದು ನೋಡುವುದಾದರೆ 200 ವಿದ್ಯಾರ್ಥಿಗಳಿರುವ ಶಾಲೆಯಿಂದ ಎಂಟನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿ ಎರಡು ವಿದ್ಯಾರ್ಥಿಗಳ ಎರಡು ತಂಡ, 10ನೇ ತರಗತಿ ಎರಡು ವಿದ್ಯಾರ್ಥಿಗಳ ಮೂರು ತಂಡದಂತೆ ಭಾಗವಹಿಸಲು ಅವಕಾಶವಿರುತ್ತದೆ. 300 ವಿದ್ಯಾರ್ಥಿಗಳಿರುವ ಶಾಲೆಯಿಂದ 8ನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿ ಎರಡು ವಿದ್ಯಾರ್ಥಿಗಳ ಎರಡು ತಂಡ, 10ನೇ ತರಗತಿ ಎರಡು ವಿದ್ಯಾರ್ಥಿಗಳ ನಾಲ್ಕು ತಂಡದಂತೆ ಭಾಗವಹಿಸಬಹುದು. 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಶಾಲೆಯಿಂದ 8ನೇ ತರಗತಿ ಎರಡು ವಿದ್ಯಾರ್ಥಿಗಳ ಒಂದು ತಂಡ, 9ನೇ ತರಗತಿಯ ವಿದ್ಯಾರ್ಥಿಗಳ ಎರಡು ತಂಡ, ಹತ್ತನೇ ತರಗತಿಯ ಎರಡು ವಿದ್ಯಾರ್ಥಿಗಳ ಐದು ತಂಡಗಳಂತೆ ಭಾಗವಹಿಸಬಹುದಾಗಿದೆ. ಸ್ಪರ್ದೇಗೆ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆ ನಡೆಯುವ ದಿನಾಂಕದಂದು ಬೆಳಿಗ್ಗೆ 9ರಿಂದ 10ರ ವರಗೆ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಪ್ರಥಮ ಬಹುಮಾನ 30,000 ಸಾವಿರ ಹಾಗು ಟ್ರೋಫಿ., ದ್ವಿತೀಯ ಬಹುಮಾನ 20,000 ಸಾವಿರ ಹಾಗು ಟ್ರೋಫಿ., ತೃತೀಯ ಬಹುಮಾನ 10,000 ಸಾವಿರ ಹಾಗೂ ಟ್ರೋಫಿ, ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದ ತಂಡಗಳಿಗೆ 5,000 ನಗದು ಬಹುಮಾನ. ಉಪಾಂತ್ಯ ಸುತ್ತಿಗೆ ಆಯ್ಕೆಯಾದ ಮೊದಲ 125 ತಂಡಗಳ ಸ್ಪರ್ಧಿಗಳಿಗೆ ಬೆಳ್ಳಿ ಪದಕಗಳನ್ನು ಪ್ರಶಸ್ತಿ ಪತ್ರಗಳೊಂದಿಗೆ ನೀಡಲಾಗುವುದು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಯ ಗುರುತಿನ ಚೀಟಿಯನ್ನು ತರಬೇಕು ಎಂದು ಎಸ್. ವಿ.ಗುರುರಾಜ್ ಮಾಹಿತಿ ನೀಡಿದರು.
ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ಸಂಚಾಲಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಉಪನ್ಯಾಸಕರನ್ನು ನಟರಾಜ್ ಯು .7483710963,ಕುಪ್ಪೇರಾವ್ ಕುಲಕರ್ಣಿ – 6362819745 ಸಂಪರ್ಕಿಸಬಹುದು.
SUMMARY | A state-level quiz competition has been organised, said S.V. Sudhakar, Principal, Sri Adichunchanagiri Independent PU College. Gururaj said.
KEYWORDS | state-level quiz, Sri Adichunchanagiri, shivamogga,