SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 20, 2025
ಶಿವಮೊಗ್ಗ | ಶ್ರಿ ಕ್ಷೇತ್ರ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠ ಹಾರನಹಳ್ಳಿ ದೇವಾಲಯದ ಹರಪುರಾಧೀಶನ ದೀಪೋತ್ಸವ ಸಮಾರಂಭ ಜನವರಿ 22 ರಿಂದ 26 ರವರಿಗೆ ನಡೆಯಲಿದೆ ಎಂದು ಚೌಕಿ ಮಠದ ಶ್ರೀ ಮ ನಿ ಪ್ರ ನೀಲಕಂಠ ಮಹಾಸ್ವಾಮಿಗಳು ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 5 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿತ್ತಾರೆ. ಮೊದಲ ದಿನ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿವೈ ವಿಜಯೇಂದ್ರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದ ಪೂರ್ಯನಾಯ್ಕ್ ಹಾಗೂ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಆಗಮಿಸಲಿದ್ದಾರೆ ಎಂದರು.
ಹಾಗೆಯೇ ಮಠದ ಹಲವು ಕಾರ್ಯಕ್ರಮದಲ್ಲಿ ದೀಪೋತ್ಸವೂ ಕೂಡ ಒಂದು. ದೀಪೋತ್ಸವದಿಂದ ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ತರುವಂತೆ ಮಾಡಬಹುದು.ಐದು ದಿನ ನಡೆಯುವ ಈ ದೀಪೋತ್ಸವದಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಹಾಗೆಯೇ ಎಂದಿನಂತೆ ನೀಡುವ ಕಲಾರತ್ನ ಪ್ರಶಸ್ತಿಯನ್ನು ಈ ಬಾರಿ 5 ಜನ ಕಲಾವಿದರಿಗೆ ನೀಡುತ್ತಿದ್ದೇವೆ ಎಂದರು.
SUMMARY | Sri Mani Pra Neelakanta Mahaswamiji of Chowki Mutt said that the deepotsava ceremony of Harapuradheesha will be held from January 22 to 26.
KEYWORDS | Neelakanta Mahaswamiji, deepotsava, Harapuradheesha,