SHIVAMOGGA | MALENADUTODAY NEWS | ಮಲೆನಾಡು ಟುಡೆ Jan 8, 2025
ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ಶಿವಮೊಗ್ಗದ ವಿವಿದೆಡೆ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅದರ ಬಗೆಗಿನ ವಿವರಗಳನ್ನ ನೋಡುತ್ತಾ ಹೋಗುವುದಾದರೆ, ವೈಕುಂಠ ಏಕಾದಶಿಯ ಪ್ರಯುಕ್ತ ದೂರ್ವಾಸ ಕ್ಷೇತ್ರ ಶಿವಮೊಗ್ಗ ನಗರದ ಕೋಟೆ ಶ್ರೀಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀಸೀತಾರಾಮಾಂಜನೇಯ ಕೈಂಕರ್ಯ ಅಭಿವರ್ಧನಿ ಸಭಾದಿಂದ ಜನವರಿ 8ರಿಂದ 15ರ ವರೆಗೆ ಶ್ರೀಸೀತಾಕಲ್ಯಾಣ ಮಹೋತ್ಸವ, ಶ್ರೀವೈಕುಂಠ ಏಕಾದಶಿ ಕಾರ್ಯಕ್ರಮಗಳು ನಡೆಯಲಿವೆ.
ಇವತ್ತು ಅಂದರೆ, ಜನವರಿ 8ರಂದು ಬೆಳಗ್ಗೆ ಮಾರುತಿ ಹೋಮ, ರಾತ್ರಿ ಗರುಡೋತ್ಸವ, ಗಜೇಂದ್ರ ಮೋಕ್ಷ, 9 ರಂದು ಬೆಳಗ್ಗೆ ಉತ್ಸವ ಮೂರ್ತಿಗಳಿಗೆ ಅಭಿಷೇಕ, ರಾತ್ರಿ ಶ್ರೀಸೀತಾಕಲ್ಯಾಣ ಮಹೋತ್ಸವ, 10 ರಂದು ರಾತ್ರಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀವೈಕುಂಠನಾಥರ ದರ್ಶನ, 11ರಂದು ಬೆಳಗ್ಗೆ ತೀರ್ಥಸ್ನಾನ, ರಾತ್ರಿ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನೆರವೇರಲಿದೆ. 12ರಂದು ಬೆಳಗ್ಗೆ ಸುದರ್ಶನ ಹೋಮ, ರಾತ್ರಿ ಉರುಟಣೆ, 13ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ, ರಾತ್ರಿ ಶಯನೋತ್ಸವ, 14ರಂದು ಬೆಳಗ್ಗೆ ಶ್ರೀರಾಮತಾರಕ ಹೋಮ, ರಾತ್ರಿ ಕೋರ್ಪಳ್ಳಯ್ಯನ ಛತ್ರದ ಬಳಿಯ ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ, 15 ರಂದು ಬೆಳಗ್ಗೆ ಮಹಾಭಿಷೇಕ, ರಾತ್ರಿ ಮೋಹಿನಿ ಅಲಂಕಾರ ಉತ್ಸವ ನಡೆಯಲಿದೆ. ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಪ್ತದ್ವಾರಗಳ ವೈಕುಂಠ ದರ್ಶನ
ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಸಪ್ತದ್ವಾರಗಳ ವೈಕುಂಠ ದರ್ಶನ ಜನವರಿ 10ರಿಂದ 12ರವರೆಗೆ ನಡೆಯಲಿದೆ. ಜನವರಿ 10ರಂದು ಬೆಳಿಗ್ಗಿನ ಜಾವ 4.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 6ಕ್ಕೆ ದೀಪೋತ್ಸವ ನಡೆಯಲಿದೆ. ಜನವರಿ 11ರಂದು ಸಂಜೆ 6.30ಕ್ಕೆ ಸತ್ಯನಾರಾಯಣ ಸ್ವಾಮಿಯ ಸಾಮೂಹಿಕ ಪೂಜೆಯಿದೆ. ಮಹಾಮಂಗಳಾರತಿ ಬಳಿಕ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
SUMMARY | 2025 vaikunta ekadasi date,vaikunta ekadasi 2025 date and time,2025 vaikunta ekadasi,vaikunta ekadasi 2025 date in tirumala,vaikunta ekadasi 2025,vaikuntha ekadashi 2025,when is vaikunta ekadasi 2025 date,vaikuntha ekadashi 2025 date,vaikunta ekadasi 2025 status,2025 mukkoti ekadasi,2025 vaikunta ekadasi telugu date,mukkoti ekadashi 2025,vaikunta ekadasi,vaikunta ekadasi 2025 in tamil,2025 mukkoti ekadasi date,tirumala vaikunta ekadasi 2025
KEY WORDS | vaikunta ekadasi,vaikunta ekadashi,vaikunta ekadasi 2023,vaikunta ekadasi 2023 date,vaikunta ekadashi 2023,vaikuntha ekadashi celebration at shivamogga,shivamogga,vaikunta ekadasi vratham,vaikunta ekadasi songs,vaikunta ekadasi date,vaikunta ekadasi 2022,vaikunta ekadasi 2023 live,vaikunta ekadasi 2023 in tamil,vaikunta ekadasi special song,2023 vaikunta ekadasi date,vaikuntha ekadashi,sri vaikuntha ekadashi,vaikunta ekadasi pooja vidhanam