KARNATAKA NEWS/ ONLINE / Malenadu today/ Jun 26, 2023 SHIVAMOGGA NEWS
ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆ ಸಂಬಂಧ ಇವತ್ತು ನಗರದ ಎಡಿಜಿಪಿ ಹಿತೇಂದ್ರ ಭೇಟಿಕೊಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅವರು, ಮುಂಬರುವ ಹಬ್ಬ ಹಾಗೂ ಚುನಾವಣೆಗಳ ಸಂಬಂಧ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದಿದ್ದು, ಈ ಸಂಬಂಧ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ನಡೆದ ಘಟನೆಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡದ ಎಡಿಜಿಪಿ ಹಿತೇಂದ್ರರವರು ಘಟನೆ ವಿಚಾರವಾಗಿ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.
ಅಧಿಕಾರಿಗಳ ಮನಸ್ಸಲ್ಲಿ ವರ್ಗಾವಣೆಯ ವಿಚಾರವಿದೆ
ಚುನಾವಣೆಯಲ್ಲಿ ಬಂದೋಬಸ್ತ್ ಚೆನ್ನಾಗಿ ನಡೆದಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹೊಸ ಸರ್ಕಾರ ಬಂದಮೇಲೆ ಕೆಲವು ಅಧಿಕಾರಿಗಳ ಮನಸ್ಸಿನಲ್ಲಿ ವರ್ಗಾವಣೆಯ ವಿಚಾರವಿದೆ. ಅವರಿಗೆ ವರ್ಗಾವಣೆ ಆಗಲಿ, ಆಗದಿರಲಿ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಅಪ್ಗ್ರೇಡ್ ಆಗಿರುವಂತಹ ಸ್ಟೇಷನ್ಗಳಲ್ಲಿ ಇನ್ಸ್ಪೆಕ್ಟರ್ಗಳು ಸರ್ಕಲ್ ಇನ್ಸ್ಪೆಕ್ಟರ್ ಗಳ ಮೆಂಟಾಲಿಟಿಯ ರೀತಿಯಲ್ಲಿ ಕೆಲಸ ಮಾಡಬಾರದು. ಇನ್ಸ್ಪೆಕ್ಟರ್ಗಳ ರೀತಿಯಲ್ಲಿಯೇ ಸ್ಟೇಷನ್ನಲ್ಲಿ ಕಾರ್ಯನಿರ್ವಹಿಸಬೇಕು ಎಂದುಸೂಚಿಸಿದ್ದೇನೆ ಎಂದಿದ್ದಾರೆ.