SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ಶಿವಮೊಗ್ಗ | ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ವಕ್ಪ್ ಮಂಡಳಿ ಸರ್ಕಾರದ ಆಸ್ತಿ ಜೊತೆಗೆ ರೈತರ ಹಾಗೂ ಸಾಮಾನ್ಯ ಜನರ ಆಸ್ತಿಯನ್ನ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಸಲ್ಮಾನರ ಆಡಳಿತ ತರಬೇಕು ಅಂತಾ ಹುನ್ನಾರ ನಡೆಸಲಾಗುತ್ತಿದೆ. ಲ್ಯಾಂಡ್ ಮಾಫಿಯಾ ವಕ್ಪ್ ಮೂಲಕ ಕೆಲಸ ಮಾಡ್ತಿದೆ ಎಂದು ದೂರಿದ ಚನ್ನಬಸಪ್ಪ ಲ್ಯಾಂಡ್ ಜಿಹಾದ್ ಅನ್ನು ವಕ್ಪ್ ಮಂಡಳಿ ಮಾಡ್ತಿದೆ ಎಂದರು.
ವಕ್ಪ್ ಬೋರ್ಟ್‌ಗೆ ಶಕ್ತಿ ಕೊಡುವ ರೀತಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡ್ತಿದ್ದಾರೆ, ಜನರು ತಮ್ಮ ತಮ್ಮ ಆಸ್ತಿಯನ್ನು ಪರಿಶೀಲನೆ ಮಾಡುವ ಸ್ಥಿತಿ ಎದುರಾಗಿದೆ ಎಂಧ ಅವರು, ದೇಶದಲ್ಲಿ ವಕ್ಪ್ ಮಂಡಳಿ ಆಸ್ತಿ ಅಂದಾಜು ಮೌಲ್ಯ 1.2 ಲಕ್ಷ ಕೋಟಿ ಇದೆ ಎಂದರು.
ತಲಾಖ್ ತಲಾಖ್ ತಲಾಖ್ ಅಂತೇಳಿ ಮದುವೆ ಕೈಬಿಡ್ತಿದ್ದರು, ಈಗ ಇಂದು ನಮ್ಮ ಆಸ್ತಿ ಅಂತೇಳಿ ಬೋರ್ಡ್ ಹಾಕಿ , ಆಸ್ತಿಯನ್ನ ಕಬಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ವಕ್ಪ್ ಮಂಡಳಿ ತನ್ನ ಕಾರ್ಯ ಸರಿಯಾಗಿ ಮಾಡ್ತಿದೆ ಅಂತಾ ರಾಜ್ಯ ಸರಕಾರ ಸರ್ಟಿಫಿಕೇಟ್ ಕೊಡ್ತಿದೆ. ಇದೇ ರೀತಿ ಮುಂದುವರಿದರೆ, ಸಚಿವ ಜಮೀರ್ ಅಹಮದ್ ಅಂತಹವರನ್ನು ಹುಡುಕಿ ಹುಡುಕಿ ಹೊಡೆಯುವ ಕೆಲಸ ಆಗುತ್ತೆ ಎಂದ ಶಾಸಕರು ಮುಂದುವರಿದು ಬಡವನ ಸಿಟ್ಟು ರಟ್ಟೆಗೆ ಬಂದರೆ ನೀವು ಓಡಾಡುವುದೇ ಕಷ್ಟವಾಗುತ್ತದೆ ಎಂದರು.
SUMMARY Addressing a press conference at the district BJP office here, Shivamogga City MLA S.N. Channabasappa alleged that the Wakf Board was taking away the property of farmers and common people along with government property.
KEYWORDS | Addressing a press conference, district BJP office, Shivamogga City MLA S.N. Channabasappa , Wakf Board