SHIVAMOGGA | MALENADUTODAY NEWS | ಮಲೆನಾಡು ಟುಡೆ Oct 25, 2024
ಶಿವಮೊಗ್ಗ | ನಾಳೆ ಶಿವಮೊಗ್ಗದಲ್ಲಿ ಇಬ್ಬರು ಸಚಿವರು ಇರಲಿದ್ದಾರೆ. ಗೃಹಸಚಿವ ಡಾ.ಜಿ ಪರಮೇಶ್ವರ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ನಾಳೆ ಶಿವಮೊಗ್ಗದಲ್ಲಿಯೇ ಇರಲಿದ್ದಾರೆ.
ತುಮಕೂರು ಜಿಲ್ಲೆ ಉಸ್ತುವಾರಿ ಸಚಿವರು ಆಗಿರುವ ಡಾ. ಜಿ ಪರಮೇಶ್ವರ್ 26.10.2024 ರಂದು ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಹೊರಟು ಶಿವಮೊಗ್ಗಕ್ಕೆ ಬೈ ರೋಡ್ ಬರಲಿದ್ದಾರೆ. 11.30 ಕ್ಕೆ ಶಿವಮೊಗ್ಗ ಸರ್ಕಿಟ್ ಹೌಸ್ ತಲುಪಲಿದ್ದಾರೆ. ಆ ಬಳಿಕ ಅರ್ಧಗಂಟೆ ಅಲ್ಲಿದ್ದು ಮಧ್ಯಾಹ್ನ 12.00 ರಿಂದ 12:30 ರವರೆಗೆ ಶಿವಮೊಗ್ಗದ ಡಿಎಆರ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ 12.30 ರಿಂದ 2:00 ರವರೆಗೆ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಅಪರಾಧ ವಿಮರ್ಶನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಅರ್ಧ ಗಂಟೆ 2 ಗಂಟೆಯಿಂದ ಸಂಜೆ 4.30 ರವೆರೆಗಿನ ಸಚಿವರ ಸಮಯವನ್ನು ಕಾಯ್ದಿರಿಸಲಾಗಿದೆ.
ಸಂಜೆ 4.30 ಕ್ಕೆ ಶಿವಮೊಗ್ಗದಿಂದ ಸೊರಬಕ್ಕೆ ಬೈ ರೋಡ್ ತೆರಳಲಿದ್ದಾರೆ. ಅಲ್ಲಿ ಸಂಜೆ ಆರು ಗಂಟೆ ಹೊತ್ತಿಗೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್. ಬಂಗಾರಪ್ಪ-92, ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿರುವ ನಮನ-ಚಿಂತನ-ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 8.00ಕ್ಕೆ ಸೊರಬದಿಂದ ಶಿವಮೊಗ್ಗಕ್ಕೆ ಬಂದು ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗ್ಗೆ ಆರು ಮೂವತ್ತರ ಸುಮಾರಿಗೆ ತುಮಕೂರಿಗೆ ಹೊರಡಲಿದ್ದಾರೆ.
SUMMARY | Shimoga | There will be two ministers in Shivamogga tomorrow. Home Minister G Parameshwara is arriving in Shivamogga. District in-charge minister Madhu Bangarappa will be in Shivamogga tomorrow.
KEYWORDS | Shimoga , two ministers in Shivamogga tomorrow, Home Minister G Parameshwara, District in-charge minister Madhu Bangarappa
