SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಶಿವಮೊಗ್ಗ | ಯುವಕನೊಬ್ಬನನ್ನ ಕ್ಷುಲ್ಲಕ ಕಾರಣಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ ಆರೋಪವೊಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಸಂಬಂಧ THE BHARATIYA NYAYA SANHITA (BNS), 2023 (U/s-126(2),115(2),140(3),109,190) ಅಡಿಯಲ್ಲಿ ಕೇಸ್ ಆಗಿದೆ.
ತುಂಗಾನಗರ ಪೊಲೀಸ್ ಠಾಣೆ
ಶಿವಮೊಗ್ಗದ ಗಾಜನೂರು ಸಮೀಪ ಹೋಟೆಲ್ ಒಂದರಲ್ಲಿ ಊಟ ಮಾಡಲು ಶಿವಮೊಗ್ಗದ ಮಾರನವಮಿ ಬೈಲ್ನ ಹುಡುಗರ ಗುಂಪು ತೆರಳಿತ್ತು. ಅಲ್ಲಿ ಊಟ ಮುಗಿಸಿ ಬಿಲ್ ಕೊಡುವಾಗ ಹುಡುಗರು ಜೋರು ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿ ಟೇಬಲ್ನಲ್ಲಿ ಕುಳಿತಿದ್ದವರು ನಿಧಾನಕ್ಕೆ ಮಾತನಾಡಿ ಎಂದಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಜಗಳವಾಗಿದೆ. ಅಲ್ಲಿದ್ದ ಉಳಿದವರು ಜಗಳ ಬಿಡಿಸಿದ್ದಾರೆ.
ಆ ಬಳಿಕ ಮಾರನವಮಿ ಬೈಲ್ನ ಹುಡುಗರು ಶಿವಮೊಗಕ್ಕೆ ವಾಪಸ್ ಆಗಿದ್ದಾರೆ. ಇವರನ್ನ ಹೋಟೆಲ್ನಲ್ಲಿ ಜಗಳವಾಡಿದ ಇನ್ನೊಂದು ಗುಂಪು ಗಾಜನೂರು ಗೇಟ್ ಬಳಿ ಇರುವ ಗ್ಯಾಸ್ ಬಂಕ್ ಅಡ್ಡ ಹಾಕಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಾರನವಮಿ ಬೈಲ್ ಹುಡುಗರು ಎಸ್ಕೇಪ್ ಆಗಿದ್ದಾರೆ. ಆ ಪೈಕಿ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ಆತನನ್ನ ಅನಾಮತ್ತು ಎತ್ತಾಕಿಕೊಂಡು ಹೋದ ಇನ್ನೊಂದು ಗುಂಪು ಆತನನ್ನ MKK ROAD ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದೆ. ಅಲ್ಲಿಂದ ಸೂಳೇಬೈಲ್ ಹತ್ತಿರ ಇರುವ ಕ್ರಷರ್ ಗೆ ಕರೆದುಕೊಂಡು ಹೋಗಿ ಮಾಡಿ ಆನಂತರ ಜೆಸಿನಗರದ ಬಳಿ ಬಿಟ್ಟು ಹೋಗಿದ್ದಾರೆ. ಈ ರೀತಿಯಾಗಿ FIR ನಲ್ಲಿ ಆರೋಪಿಸಲಾಗಿದೆ.
SUMMARY |An FIR has been registered at tunganagar police station for allegedly kidnapping and assaulting a youth over a petty issue. A CASE HAS BEEN REGISTERED UNDER BHARATIYA NYAYA SANHITA (BNS), 2023 (U/s-126(2),115(2),140(3),109,190).
KEYWORDS | FIR , tunganagara police station, kidnapping and assaulting, BHARATIYA NYAYA SANHITA ,BNS, 126(2),115(2),140(3),109,190),