SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 12, 2024 | CHIKKAMAGALUIRU | ಚಿಕ್ಕಮಗಳೂರು | ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 250 ಅಡಿ ಆಳಕ್ಕೆ ಬಿದ್ದಿರುವ ಘಟನೆ ದತ್ತಪೀಠ (Dattapeeta) ಮಾರ್ಗದ ಕವಿಕಲ್ ಗಂಡಿ ಬಳಿ ಸಂಭವಿಸಿದೆ.
ಮೂಲತಃ ತೆಲಂಗಾಣ (Telangana) ರಾಜ್ಯದ ನೋಂದಣಿ ಇರುವ ಕಾರು ಆಕ್ಟಿಡೆಂಟ್ ಆಗಿದ್ದು, ಕಾರಿನಲ್ಲಿದ್ದವರು ಹೈದರಾಬಾದ್ ನವರು ಎನ್ನಲಾಗಿದೆ. ಅದೃಷ್ಟಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಪ್ರಪಾತಕ್ಕೆ ಉರುಳುವಾಗ ಮರಗಳು ಅಡ್ಡಿಯಾದ್ದರಿಂದ ಕಾರಿನಲ್ಲಿದ್ದ ಮಗುವೂ ಸೇರಿದಂತೆ ಐವರು ಬಚಾವ್ ಆಗಿದ್ದಾರೆ. ಇನ್ನೂ ಕಾರು ಪಾತಾಳಕ್ಕೆ ಬಿದ್ದ ವಿಷಯ ತಿಳಿಯುತ್ತಲೇ ಸ್ಥಳೀಯರು ದೌಡಾಯಿಸಿ ಎಲ್ಲಾ ಪ್ರಯಾಣಿಕರನ್ನ ರಕ್ಷಿಸಿದ್ದಾರೆ.
SUMMARY | Chikkamagaluru | The incident took place near Kavikal Gandi on dattapeeta road when the driver lost control of the car and fell into a depth of about 250 feet.
KEYWORDS | Chikkamagaluru, Kavikal Gandi , dattapeeta road