SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 10, 2024 | STATE NEWS KARNATAKA |
ಅತ್ತೆಯನ್ನ ಕೊಂದ ಅಳಿಯ
ಚಿಕ್ಕಬಳ್ಳಾಪುರ: ಆಸ್ತಿಯ ವಿಚಾರ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆ ಅಳಿಯನೋರ್ವ ಚಾಕುವಿನಿಂದ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿಯಲ್ಲಿ ನಡೆದಿದೆ. ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದ ಕವಿತಮ್ಮ (43) ಕೊಲೆಯಾದ ದುರ್ದೈವಿ. ಚಂದ್ರು (30) ಕೊಲೆ ಆರೋಪಿ. ಆಸ್ತಿ ವಿಚಾರವಾಗಿ ಮನೆಯಲ್ಲಿ ಪದೇ ಪದೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಅಡಕೆ ದರೋಡೆ ಕೇಸ್ 7 ಮಂದಿ ಅರೆಸ್ಟ್
ದಾವಣಗೆರೆ: ಅಡಕೆ ವ್ಯಾಪಾರಿಯನ್ನು ಬೆದರಿಸಿ 17 ಲಕ್ಷ ರೂ. ನಗದು, ಮೊಬೈಲ್ ದೋಚಿದ್ದ 7 ಜನ ದರೋಡೆ ಕೋರರನ್ನು ಎರಡೇ ದಿನದಲ್ಲಿ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮಾಡಿದ್ದ ನಗದು ಹಾಗು ದರೋಡೆಗೆ ಬಳಸಿದ್ದ ಎರಡು ಕಾರು, ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರು ಮೈಸೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯವರಾಗಿದ್ದಾರೆ. ಅಡಿಕೆ ವ್ಯಾಪಾರ ಮಾಡಿಸಿಕೊಡುವುದಾಗಿ ಕರೆದೊಯ್ದು ಈ ಕೃತ್ಯವೆಸಗಿದ್ದರು.
ಮಾಜಿ ಸಿಎಂಗಳ ಹನಿಟ್ರ್ಯಾಪ್ ವಿಡಿಯೋ
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಸಂತ್ರಸ್ತೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಮುನಿರತ್ನರವರು ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದರು. ಆನಂತರ ಅವರನ್ನು ಬ್ಲಾಕ್ ಮೇಲ್ ಮಾಡಿದ್ದರು, ಅದರ ಮೂಲಕ ಮುನಿರತ್ನ ನಾಯ್ಡು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು ಎಂದು ದೂರಿದ್ದಾರೆ. ಅಲ್ಲದೆ ಇಬ್ಬರು ಮಾಜಿ ಸಿಎಂಗಳಿಗೆ ಈ ರೀತಿ ಮಾಡಿದ್ದು, ಅಧಿಕಾರಿಗಳು ಸಹ ಟ್ರ್ಯಾಪ್ ಆಗಿದ್ದಾರೆ. ಭದ್ರತೆ ನೀಡಿದರೆ ಸಂಬಂಧಪಟ್ಟ ವಿಡಿಯೋ ಬಿಡುಗಡೆಮಾಡುವುದಾಗಿ ಹೇಳಿದ್ದಾರೆ.
SUMMARY | Son-in-law kills mother-in-law , Chintamani, Chikkaballapura , complainant against Munirathna , honeytrap of former CMs, Arecanut robbers arrested , Channagiri , Davanagere district
KEYWORDS | Son-in-law kills mother-in-law , Chintamani, Chikkaballapura , complainant against Munirathna , honeytrap of former CMs, Arecanut robbers arrested , Channagiri , Davanagere district