SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ಮೆಸ್ಕಾಂ: ಆನ್ಲೈನ್ ಸೇವೆ ತಾತ್ಕಾಲಿಕ ಅಲಭ್ಯ
ನಾಳೆಯಿಂದ ಅಂದರೆ ಅಕ್ಟೋಬರ್ 04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ಲೈನ್ ಸೇವೆಗಳಾದ ವಿದ್ಯುತ್ ಬಿಲ್ಗಳ ಪಾವತಿ, ಹೊಸ ಸಂಪರ್ಕ ಸೇವೆಗಳು, ಹೆಸರು ಮತ್ತು ಜಕಾತಿ ಬದಲಾವಣೆ ಹಾಗೂ ಮೊಬೈಲ್ ಆಪ್ ಇತ್ಯಾದಿ ಸೇವೆಯು ಮೆಸ್ಕಾಂ ವ್ಯಾಪ್ತಿಯ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು RAPDRP ನಗರ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿರುವುದಿಲ್ಲ.
ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿದ್ದು, ಈ ಸಮಯದಲ್ಲಿ ತಂತ್ರಾಂಶದ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಮತ್ತು ಹೊಸದಾಗಿ ಜಿ.ಒ.ಎಸ್ ಮದ್ಯಂತರ ಕಂಬಗಳನ್ನು ಅಳವಡಿಸುವ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 05 ರಂದು ಬೆಳಗ್ಗೆ 9.30 ರಿಂದ ಸಂಜೆ 6.00ರವರೆಗೆ ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿಕ್ಯಾಂಪ್, ಭೋಜಪ್ಪಕ್ಯಾಂಪ್, ದುಮ್ಮಳ್ಳಿ, ಓತಿಘಟ್ಟ, ಮಾಚೇನಹಳ್ಳಿ, ಬಿದರೆ, ನಿದಿಗೆ, ಜಯಂತಿಗ್ರಾಮ, ಹೊನ್ನವಿಲೆ, ನವಿಲೆಬಸವಾಪುರ, ಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮಾಳೇನಹಳ್ಳಿ, ರಾಮಮೂರ್ತಿ ಮಿನರಲ್ಸ್ & ಮೆಟಲ್ಸ್, ಅಮರಾವತಿ ಕ್ಯಾಂಪ್, ಹಳೆಶೆಟ್ಟಿಹಳ್ಳಿ, ಹಾತಿಘಟ್ಟ, ಮತ್ತಿಘಟ್ಟ, ಹಸೂಡಿ, ಐ.ಪಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.