SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 24, 2024 : SHIVAMOGGA NAVARATRI
ಶಿವಮೊಗ್ಗ ದಸರಾ ಸಂದರ್ಭದಲ್ಲಿ ಸಕ್ರೆಬೈಲ್ ಆನೆ ಬಿಡಾರಗಳಿಂದ ಆನೆಗಳನ್ನ ಕರೆತಂದು ಅವುಗಳ ಮೇಲೆ ಚಾಮುಂಡೇಶ್ವರಿಯ ವಿಗ್ರಹವನ್ನ ಇರಿಸಿ ಜಂಬುಸವಾರಿ ನಡೆಸಲಾಗುತ್ತದೆ. ಈ ನಡುವೆ ಈ ಸಲ ಶಿವಮೊಗ್ಗದ ದಸರಾಕ್ಕೆ ಸಕ್ರೆಬೈಲ್‌ನಿಂದ ಆನೆಗಳು ಬರುತ್ತವಾ ಇಲ್ಲವಾ ಎನ್ನುವ ಗೊಂದಲ ಉಂಟಾಗಿತ್ತು.
ಇದರ ನಡುವೆ ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಆನೆಗಳನ್ನು ನೀಡಲು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಆದೇಶಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯಲಿರುವ ದಸರಾ ಕಾರ್ಯಕ್ರಮಕ್ಕೆ ಬೆಳ್ಳಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಗೆ ಈ ಬಾರಿಯೂ ಆನೆಗಳನ್ನು ಒದಗಿಸಿಕೊಡುವಂತೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು.
ನಿಯೋಗದ ಮನವಿಗೆ ಸ್ಪಂದಿಸಿರುವ ಅರಣ್ಯ ಸಚಿವರು ಶಿವಮೊಗ್ಗದ ಮುಖ್ಯ. ಅರಣ್ಯ ಸಂರಕ್ಷಣಾಧಿ ಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ದಸರಾಕ್ಕೆ ಆನೆಗಳನ್ನು ಒದಗಿಸುವಂತೆ ಸೂಚಿಸಿ, ಆದೇಶಿಸಿದ್ದಾರೆ ಎಂದು ಎಚ್.ಸಿ. ಯೋಗೀಶ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

