SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 22, 2024 shimoga news
ಸರ್ಕಾರಿ ಕಚೇರಿಗಳಿಂದಲೇ ಬಿಲ್ ಬಾಕಿ
ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಕಚೇರಿಗಳು ಮೆಸ್ಕಾಂಗೆ ₹300 ಕೋಟಿಗೂ ಹೆಚ್ಚಿನ ವಿದ್ಯುತ್ ಬಿಲ್ ಸಂದಾಯ ಮಾಡದೇ ಬಾಕಿ ಉಳಿಸಿಕೊಂಡಿವೆ ಎಂಬ ವಿಚಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಬಿಲ್ ಪಾವತಿಯ ಬಗ್ಗೆ ಸೂಚನೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ಎಷ್ಟಿದೆ ಡೆಂಗ್ಯು ಕೇಸ್
ಇನ್ನೂ ಇದೇ ಸಂದರ್ಭದಲ್ಲಿ ಡಿಹೆಚ್‌ಓ ಡಾ.ನಟರಾಜ್ ಮಾತನಾಡಿ, ಒಟ್ಟು 600 ಡೆಂಗ್ಯು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜುಲೈ ಮಾಹೆಯಲ್ಲಿ 167, ಆಗಸ್ಟ್ 115 ಮತ್ತು ಸೆಪ್ಟೆಂಬರ್‌ಲ್ಲಿ 35 ಪ್ರಕರಣ ದಾಖಲಾಗಿದ್ದು ಇದೀಗ ಪ್ರಕರಣ ಕಡಿಮೆಯಾಗಿದೆ. ಬೆಳಗಿನ ಜಾವ ಸರ್ವೇಕ್ಷಣೆ, ಇತರೆ ನಿಯಂತ್ರಣ ಕ್ರಮಗಳಿಂದ ಡೆಂಗ್ಯು ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. ಆದರೆ ಸೊರಬ ಮತ್ತು ಹೊಸನಗರದಲ್ಲಿ ತಜ್ಞ ವೈದ್ಯರ ಕೊರತೆ ಅಂತಾ ಮಾಹಿತಿ ತಿಳಿಸಿದ್ದಾರೆ.
ಮೊಟ್ಟೆಗೆ ಬಿಲ್ ಬಂದಿಲ್ಲ, ಹಾಲಿಗೆ ಸಕ್ಕರೆ ಇಲ್ಲ
ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗುತ್ತಿದ್ದು ಜುಲೈ ವರೆಗೆ ಮೊಟ್ಟೆ ಹಣಪಾವತಿ ಆಗಿದೆ. ರೂ.2.05 ಕೋಟಿ ಹಾಲಿನ ಪೌಡರ್ ಹಣ ಬಾಕಿ ಇದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದಡೆ ಕ್ಷೀರ ಭಾಗ್ಯ ಯೋಜನೆಯಡಿ ಸಕ್ಕರೆ ಸರಬರಾಜು ಆಗಿಲ್ಲ. ರೂ.40 ಕೆ.ಜಿ ಗೆ ನಿಗದಿಯಾಗಿದ್ದು ಈ ನಿಗದಿತ ಹಣಕ್ಕೆ ಸಕ್ಕರೆ ಲಭ್ಯವಾಗದ ಕಾರಣ ಸರಬರಾಜು ಸಾಧ್ಯವಾಗಿಲ್ಲ. ರೂ. 50 ನಿಗದಿ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದರು.
215 ರೂಟ್‌ಗೆ ಬಸ್ ಬಿಡಿ
ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶೇ. 42.8 ಆದಾಯ ಶಕ್ತಿ ಯೋಜನೆಯಿಂದ ಬರುತ್ತಿದ್ದು, ಶೇ.60.5 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಜಾರಿಯಾದಾಗಿನಿಂದ ಹೆಚ್ಚುವರಿ ಬಸ್‌ಗಳು ಮತ್ತು ರೂಟ್‌ಗಳ ಬೇಡಿಕೆ ಹೆಚ್ಚಿದೆ. 365 ಬಸ್‌ಗಳು ಓಡಾಡುತ್ತಿದ್ದು, 215 ರೂಟ್ ಬೇಡಿಕೆ ಇದೆ ಎಂದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ