SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 22, 2024 State news
ದರೋಡೆ ಕೇಸ್‌ನಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನ ಬಂಧಿಸಿರುವ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ. ಕಳೆದ
ಸೆಪ್ಟೆಂಬರ್ 12ರಂದು ನಡೆದಿದ್ದ ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರೇ, ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ನ್ನ ಬಂಧಿಸಿದ್ದಾರೆ.
ಬಳ್ಳಾರಿಯ ರಾಯದುರ್ಗ ಬಸ್ ನಿಲ್ದಾಣದ ಸಮೀಪ ರಘು ಎಂಬಾತನ ಕಣ್ಣಿಗೆ ಕಾರದ ಪುಡಿ ಎರಚಿ 22.99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ದರೋಡೆ ಮಾಡಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಏಳು ಆರೋಪಿಗಳನ್ನ ಬಂಧಿಸಿದೆ. ಅಲ್ಲದೆ ದರೋಡೆಯ ಹಣ ಹಾಗೂ ಚಿನ್ನವನ್ನ ದರೋಡೆಕೋರರಿಂದ ತನ್ನ ಮನೆಗೆ ಸಾಗಿಸಿದ್ದ ಆರೋಪ ಹಾಗೂ ದರೋಡೆಗೆ ತನ್ನ ಬೈಕ್ ಕೊಟ್ಟು ಕಳಿಸಿದ್ದ ಆರೋಪದ ಅಡಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನ ಅರೆಸ್ಟ್ ಮಾಡಲಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ