SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shimoga court case
2023ನೇ ಸಾಲಿನಲ್ಲಿ ಬಾಲಕಿಯೊಬ್ಬರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯವೊಂದರ ಘಟನೆಯ ಸಂಬಂಧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ, (Additional District and Sessions Court FTSC-1 Shivamogga) 70 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ
9 ವರ್ಷದ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ
09 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು ನೊಂದ ಬಾಲಕಿಯ ತಾಯಿಯು ದೂರು ನೀಡಿದ್ದರು. ಆ ಸಂಬಂಧ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೆಕ್ಷನ್ 376 (ಎ) (ಬಿ), 506 ಐಪಿಸಿ ಮತ್ತು 4, 6 ಪೋಕ್ಸೋ ಕಾಯ್ದೆ ರೀತ್ಯಾ ಕೇಸ್ ಆಗಿತ್ತು. ಅವತ್ತಿನ ತನಿಖಾಧಿಕಾರಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ (Charge sheet) ಸಲ್ಲಿಸಿದ್ದರು.
ಈ ಸಂಬಂಧ ಕೋರ್ಟ್ನಲ್ಲಿ ಸರ್ಕಾರಿ ಅಭಿಯೋಜಕರು ಶ್ರೀಧರ್ ಹೆಚ್. ಆರ್, ವಾದ ಮಂಡಿಸಿದ್ದರು. ಇದೀಗ ವಿಚಾರಣೆ ಮುಗಿದು ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾದೀಶರಾದ ಮೋಹನ್ ಜೆ. ಎಸ್ ರವರು ದಿನಾಂಕಃ 13-09-2024 ರಂದು ಪ್ರಕರಣದ ಆರೋಪಿ 70 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,10,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 2 ಲಕ್ಷ ಮತ್ತು ಸರ್ಕಾರದಿಂದ 2 ಲಕ್ಷರೂಗಳನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಿರುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3