SHIVAMOGGA | MALENADUTODAY NEWS
Sep 7, 2024 mescom shimoga
ಶಿವಮೊಗ್ಗದಲ್ಲಿ ಗಣೇಶೋತ್ಸವ ಆರಂಭವಾಗಿದೆ. ಪ್ರತಿಸಲದಂತೆ ಈ ಸಲವೂ ಹಿಂದೂ ಮಹಾಸಭಾ ಗಣಪತಿಯ ಪ್ರತಿಷ್ಠಾಪನೆ ವಿಶೇಷವಾಗಿ ನಡೆಯಿತು. ಕುಂಬಾರ ಕೇರಿಯ ಕಲಾವಿದ ಗಣೇಶಪ್ಪರ ಮನೆಯಲ್ಲಿ ತಯಾರಾದ ಗಣಪತಿಯನ್ನು ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡು ಸಂಘಟನೆ ಸದಸ್ಯರು, 11.30 ಸುಮಾರಿಗೆ ಗಣಪತಿಯನ್ನು ಭಿಮೇಶ್ವರ ದೇವಾಲಯ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಸಣ್ಣಗಣಪತಿಯನ್ನ ಪ್ರತಿಷ್ಟಾಪನೆ ಮಾಡಿದ ಬಳಿಕ ನಾಲ್ಕು ಅಡಿಯ ಉತ್ಸವ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.


ಶಿವಮೊಗ್ಗ ನಗರ ಶಾಸಕ ಎಸ್‌ಎನ್ ಚನ್ನಬಸಪ್ಪ
10 ದಿನಗಳ ವಿಶೇಷ ಕಾರ್ಯಕ್ರಮಗಳನ್ನ ಗಣಪತಿಯ ಸಮ್ಮುಖದಲ್ಲಿ ಆಯೋಜಿಸಲಾಗಿದೆ. ಇದೇ ಹದಿನೇಳನೇ ತಾರೀಖು ಹಿಂದೂ ಮಹಾಸಭಾ ಮಹಾಗಣಪತಿಯ ರಾಜಬೀದಿ ಉತ್ಸವ ನಡೆಯಲಿದೆ. ಈ ಸಂಬಂಧ ಮಾಹಿತಿ ನೀಡಿರುವ ಶಿವಮೊಗ್ಗ ನಗರ ಶಾಸಕ ಎಸ್‌ಎನ್ ಚನ್ನಬಸಪ್ಪರವರು ರಾಷ್ಟ್ರಭಕ್ತಿಯ ಜಾಗ್ರತೆಗಾಗಿ ಆರಂಭವಾದ ಈ ಗಣೇಶೋತ್ಸವ ಇವತ್ತು ಎಲ್ಲೆಡೆ ರಾಷ್ಟ್ರಭಕ್ತರನ್ನ ಹೊರಹೊಮ್ಮಿಸುತ್ತಿದೆ. ಎಲ್ಲರಿಗೂ ಗಣೇಶೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.
Hindu mahasaba ganapati
80 ನೇ ವರ್ಷದ ಹಿಂದೂ ಮಹಾ ಮಂಡಳಿಯ ಗಣೇಶೋತ್ಸವಕ್ಕೆ ಚಾಲನೆ ದೊರೆತಿದ್ದು ಇವತ್ತಿನಿಂದಲೇ ವಿವಿಧ ಕಾರ್ಯಕ್ರಮಗಳು ನಡೆಯಲಿವೆ
ಸೆ.8 ರಂದು ನೀಲಾವರದ ಯಕ್ಷ ಸಮಹ ಹಾಗೂ ಯಕ್ಷ ಕಲಾಪ್ರತಿಷ್ಠಾನ ಇವರಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ,
ಸೆ.9 ರಂದು ಶಿವಮೊಗ್ಗದ ದೀಪಿಕಾ ಶ್ರೀಕಾಂತ್ ಮತ್ತು ತಂಡದವರಿಂದ ಸುಗಮ ಸಂಗೀತ,
ಸೆ.10 ರಂದು ಶಿವಮೊಗ್ಗ ಸಹೋದರಿಯರಾದ ಕು.ಸೃಷ್ಠಿ ಎಸ್ ವರ್ಮ ಮತ್ತು ಕು.ಸ್ಪೂರ್ತಿವೆಸ್ ವರ್ಮರವರಿಂದ ಸುಗಮ ಸಂಗೀತ,
ರಾತ್ರಿ 8-30 ಕ್ಕೆ ನನನ… ನಮ್ ರಸ್ತೆಯ ಕುರಿತು ಹಾಸ್ಯನಾಟಕ
ಸೆ.11 ರಂದು ಶಿವಮೊಗ್ಗದ ಯಕ್ಷ ಸಂವರ್ಧನಾ ಸಭಾದವರಿಂದ ಮೂಲಾಸುರ ವಧೆ ಯಕ್ಷಗಾನ,
ಸೆ.12 ರಂದು,ಹಾವೇರಿಯ ಶಾರ್ವರೀಶ ನಾಟ್ಯ ಕೇಂದ್ರದ ವಿಧೂಷಿ ಶೃತಿ ಜೋಷಿ ಅವರಿಂದ ಭರತನಾಟ್ಯ,
ಸೆ.13 ರಂದು ಕೇಡಲಸರದ ಶ್ರೀ ಮಹಾಗಣಪತಿ ವೀರಾಂಜನೇಯ ಕಲಾಪ್ರತಿಷ್ಠಾನದ ವತಿಯಿಂದ ಶ್ರೀರಾಮ ದರ್ಶನ ಯಕ್ಷಗಾನ
ಸೆ.14 ರಂದು ಮುರುಳಿ ಸಾಂಸ್ಕೃತಿಕ ಕಲಾಸಂಘದ ಹೊಸೂರು ಕೆ.ರಾಜ್ ಕುಮಾರ್ ಮತ್ತು ಕೆ.ಎಸ್.ದಾಕ್ಷಯಿಣಿ ರಾಜ್ ಕುಮಾರ್ ಅವರಿಂದ ನಾದಲೀಲೆ
ಸೆ.15 ರಂದು ಧಾರೇಶ್ವರ ಶ್ರೀ ಸಿದ್ದವಿನಾಯಕ ಯಕ್ಷಗಾನ ನಾಟ್ಯ ಸಂಘದ ವತಿಯಿಂದ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ
ಸೆ.16 ರಂದು ಗಣಪತಿಯ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಹಾಗೂ ವೀರ ಶಿವಮೂರ್ತಿಯವರ ಪುಣ್ಯ ಸ್ಮರಣೆ
ಸೆ.17 ರಂದು 1945 ರಿಂದ ಹಿಂದೂ ಮಹಾಸಂಘಟನಾ ಮಹಾಮಂಡಳಿಯ ವತಿಯಿಂದ ಶಿವಮೊಗ್ಗದಲ್ಲಿ 80ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ನಡೆಯಲಿದೆ.
\
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ