SHIVAMOGGA | MALENADUTODAY NEWS
Sep 6, 2024
Kpsc recruitment 2024 | ಗಣೇಶೋತ್ಸವದ ನಡುವೆ ಸರ್ಕಾರ ಕೆಪಿಎಸ್‌ಸಿ ಸದಸ್ಯರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ಘನ ಸರ್ಕಾರದ ಪರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, (Thaawar Chand Gehlot) ಈ ಆದೇಶವನ್ನು ಹೊರಡಿಸಿದ್ದಾರೆ.
Kpsc member Dr. H.S. Bhojanayak- ಡಾ: ಹೆಚ್.ಎಸ್. ಭೋಜನಾಯ್ಕ
ಡಾ: ಹೆಚ್.ಎಸ್. ಭೋಜನಾಯ್ಕ, ಪ್ರಾಧ್ಯಾಪಕರು, ಕೈಗಾರಿಕಾ ರಾಸಾಯನ ಶಾಸ್ತ್ರ, ವಿಭಾಗ ಮತ್ತು ಮಾಜಿ ರಿಜಿಸ್ಟ್ರಾರ್. ಕುವೆಂಪು ವಿಶ್ವವಿದ್ಯಾಲಯ, ಶಂಕರ ಘಟ್ಟ, ಇವರನ್ನು ಕೆಪಿಸಿಸಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
Kuvempu university -ಕುವೆಂಪು ವಿಶ್ವವಿದ್ಯಾಲಯ
ಡಾ ಬೋಜನಾಯ್ಕ ಕುವೆಂಪು ವಿಶ್ವವಿದ್ಯಾಲಯ ದಲ್ಲಿ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುವೆಂಪು ವಿಶ್ವ ವಿದ್ಯಾನಿಲಯದ ಕುಲಸಚಿವರಾಗಿ ಕೆಲಸ ಮಾಡಿದ್ದಾರೆ. ಸಂಶೋದನೆಗೆ ಭೋಜನಾಯ್ಕ ಹೆಚ್ಚು ಒತ್ತು ನೀಡಿದ್ದ ಬೋಜನಾಯ್ಕ್‌ರವರ ಅವಧಿಯಲ್ಲಿ ನ್ಯಾಕ್ ಕಮಿಟಿ ದೇಶದ ಉತ್ತಮ ವಿಶ್ವ ವಿದ್ಯಾನಿಲಯ ಪೈಕಿ ಕುವೆಂಪು ವಿವಿಗೆ 73 ನೇ ಸ್ಥಾನ ನೀಡಿತ್ತು
ಟಾಪ್ ಟೆನ್ ಲೀಸ್ಟ್ ನಲ್ಲಿ ಕುವೆಂಪು ವಿವಿಯನ್ನು ತರಬೇಕು ಎಂಬುದು ಬೋಜನಾಯ್ಕ್ ಗುರಿಯಾಗಿತ್ತು .ಆದರೆ ಬೋಜನಾಯ್ಕ ವಿರೋದಿ ಬಣ ಇವರ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ. ಲೋಕಾಯುಕ್ತರಿಗೆ ದೂರು ನೀಡಿತ್ತು.
ಈ ಕಾರಣದಿಂದ ಕಳೆದ ಬಾರಿ ಕುವೆಂಪು ವಿವಿ ಕುಲಪತಿಗಳಾಗುವ ಅವಕಾಶದಿಂದ ವಂಚಿತರಾದರು. ಈ ಬಾರಿ ಕೆಪಿಎಸ್ಸಿ ಗೆ ಭೋಜಾನಾಯ್ಕ್ ಹೆಸರು ಶಿಪಾರಸ್ಸು ಮಾಡಿದಾಗಲು ವಿರೋಧಿ ಬಣ ತಡೆಯೊಡ್ಡಿತ್ತು. ಸರ್ಕಾರದ ಮಟ್ಣದಲ್ಲಿ ಕೂಲಂಕುಶ ತನಿಖೆಯಾದಾಗ ಬೋಜನಾಯ್ಕ್ ಮೇಲಿರುವ ಆರೋಪಗಳೆಲ್ಲ ಸುಳ್ಳು ಎಂದು ಸಾಭೀತಾಯಿತು.ಇದನ್ನು ಮನಗಂಡ ಸರ್ಕಾರ ಬೋಜನಾಯ್ಕರನ್ನ ಕೆಪಿಎಸ್ಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದೆ. ಇವತ್ತು ಅವರ ಕೆಪಿಎಸ್‌ಸಿ ಸದಸ್ಯರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ