SHIVAMOGGA | MALENADUTODAY NEWS | Aug 30, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ಇಂದಿನ ರಾಶಿ ಭವಿಷ್ಯ
Aug 30, 2024 ದಿನಾಂಕದ ಜಾತಕ ಫಲ
ಮೇಷ: ಇಂದಿನ ರಾಶಿ ಭವಿಷ್ಯ
ನಿಮಗೆ ಸಂತೋಷದ ದಿನವಾಗಲಿದೆ. ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಯೋಜಿಸಿದ್ದರೆ ಮುಂದುವರಿಯುತ್ತೀರಿ. ಕಚೇರಿಯಲ್ಲಿ ಕೆಲವರು ಸಹಾಯ ಮಾಡುತ್ತಾರೆ. ಶುಭ ಸಮಾಚಾರ ಕೇಳಬಹುದು.
ತಂದೆ ತಾಯಿ ಜೊತೆ ಸಮಯ ಕಳೆಯುತ್ತೀರಿ
ವೃಷಭ: ಇಂದಿನ ರಾಶಿ ಭವಿಷ್ಯ
ನಿಮ್ಮ ಖರ್ಚು ಮತ್ತು ಅಭ್ಯಾಸಗಳು ನಿಮಗಿಂದು ನಷ್ಟ ತರಬಹುದು. ಜನರು ನಿಮ್ಮಿಂದಲೇ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಮನಸ್ಸಿನಲ್ಲಿ ಶಾಂತಿ ಇರುತ್ತದೆ.ಯಾವುದೇ ವಿಷಯವನ್ನ ಮೈಮೇಲೆ ಎಳೆದುಕೊಳ್ಳದಿರಿ
ಮಿಥುನ: ಇಂದಿನ ರಾಶಿ ಭವಿಷ್ಯ
ಹಣಕ್ಕೆ ಸಂಬಂಧಿಸಿದ ನಿರ್ಧಾರಗಳು ಖರ್ಚಿಗೆ ದಾರಿ ಮಾಡಿಕೊಡುತ್ತದೆ. ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುವುದು. ಅಂತಿಮವಾಗಿ ದಿನ ನೆಮ್ಮದಿ ತರುತ್ತದೆ
ಕರ್ಕ: ಇಂದಿನ ರಾಶಿ ಭವಿಷ್ಯ
ವ್ಯಾಪಾರ ವ್ಯವಹಾರಗಳಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಅಪರಿಚಿತ ವ್ಯಕ್ತಿಗಳು ಸಮಸ್ಯೆ ತಂದೊಡ್ಡಬಹುದು ಸಂಗಾತಿಯ ಆರೋಗ್ಯ ಸ್ವಲ್ಪ ಹದಗೆಡಬಹುದು. ತಾಯಿ ತನ್ನ ಕುಟುಂಬದ ಸದಸ್ಯರೊಂದಿಗೆ ದಿನಕಳೆಯುವಿರಿ
ಸಿಂಹ: ಇಂದಿನ ರಾಶಿ ಭವಿಷ್ಯ
ಕೆಲಸದ ವಿಷಯದಲ್ಲಿ ಇವತ್ತು ಉತ್ತಮ ದಿನ. ವಿವಾಹಿತರಿಗು ಇವತ್ತು ಸಂತೋಷದ ದಿನ, ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಕೆಲಸಕ್ಕಾಗಿ ಹೊರಗಡೆ ಹೋಗುವಿರಿ. ದಿನ ತಾಳ್ಮೆಯ ಪಾಠ ಕಲಿಸುತ್ತದೆ.
ಕನ್ಯಾ: ಇಂದಿನ ರಾಶಿ ಭವಿಷ್ಯ
ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ದಿನ. ಶತ್ರುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ನೀವು ಯೋಚಿಸ್ತಿರುವುದು ನಿಜವೇ ಆಗಬಹುದು. ದಿನದಲ್ಲಿ ಆದಾಯ ಸಿಗುವುದು. ಕಾನೂನು ವಿಷಯಗಳಿಗೆ ಸಂಬಧಿಸಿದಂತೆ ಕೆಲಸವಾಗುವುದು
ತುಲಾ: ಇಂದಿನ ರಾಶಿ ಭವಿಷ್ಯ
ಸಂತೋಷದ ದಿನವಾಗಲಿದೆ. ಒಂದರ ಹಿಂದೆ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ. ಆರೋಗ್ಯದ ಬಗ್ಗೆ ಚಿಂತಿಸುವಿರಿ. ಬ್ಯಾಂಕ್ ಕೆಲಸ ಸಲೀಸು, ಪ್ರೀತಿಪಾತ್ರರ ಜೊತೆಭೇಟಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ವೃಶ್ಚಿಕ: ಇಂದಿನ ರಾಶಿ ಭವಿಷ್ಯ
ಹಣಕಾಸಿನ ಲಾಭದ ದಿನ. ಆದರೆ ಆರೋಗ್ಯದ ಬಗ್ಗೆ ನೀವು ಅಸಡ್ಡೆ ಹೊಂದಿದ್ದರೆ, ಎಲ್ಲವೂ ಕೈಕೊಡುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳು ಬಗೆಹರಿಯಲಿದೆ. ಹಿರಿಯರ ಸಲಹೆ ಕೇಳಬಹುದು. ಮುಂದಿನ ಶುಭಕಾರ್ಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತದೆ
ಧನು: ಇಂದಿನ ರಾಶಿ ಭವಿಷ್ಯ
ಸಾಮಾನ್ಯ ದಿನ. ಅನಗತ್ಯ ಒತ್ತಡ, ಕೆಲಸದ ಮೇಲೆ ಪರಿಣಾಮ. ಮನೆಯಲ್ಲಿನ ಕಿರಿಕಿರಿ ತಪ್ಪಿಸಿಕೊಳ್ಳುತ್ತೀರಿ, ವ್ಯವಹಾರಿಕ ನಿರ್ದಾರಗಳು ಸಮಸ್ಯೆ ತರಬಹುದು. ಮನೆಯಿಂದ ದೂರ ಹೋಗಬೇಕಾಗಬಹುದು.
ಮಕರ: ಇಂದಿನ ರಾಶಿ ಭವಿಷ್ಯ
ಮನೆಯಿಂದಲೇ ಲಾಭ ಸಾಧ್ಯತೆ, ಅಮ್ಮ ದುಡ್ಡುಕೊಡಬಹುದು. ಕೆಲಸದ ಗೆಲುವಿಗೆ ತಾಯಿಯೇ ಆಶೀರ್ವಾದ ಕಾರಣವಾಗಬಹುದು. ದಿನವಿಡಿ ಶ್ರಮವಾದರೂ ನೆಮ್ಮದಿಯ ಖುಷಿ ಮನದಲ್ಲಿ ಇರುತ್ತದೆ. ದಿನವಿಡಿ ಜಯವನ್ನು ಕಾಣುತ್ತೀರಿ.
ಕುಂಭ: ಇಂದಿನ ರಾಶಿ ಭವಿಷ್ಯ
ಆರ್ಥಿಕ ಲಾಭದ ದಿನವಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನಿಮ್ಮ ಕೆಲಸದಲ್ಲಿ ನಿರತರಾಗಿರುತ್ತೀರಿ. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ
ಮೀನ: ಇಂದಿನ ರಾಶಿ ಭವಿಷ್ಯ
ಇತರ ದಿನಗಳಿಗಿಂತ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ, ಇದರಿಂದಾಗಿ ನಿಮ್ಮ ಖರ್ಚುಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.