ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಮಹತ್ವದ ಪ್ರಕರಣವೊಂದನ್ನ ಭೇದಿಸಿದ್ದಾರೆ. ವಾರದ ಹಿಂದೆ ಶಿವಮೊಗ್ಗ ನಗರ ದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೊಪಿಯನ್ನಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ 35 ಲಕ್ಷ ಮೌಲ್ಯ ಚಿನ್ನ ಹಾಗೂ ದುಡ್ಡನ್ನ ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 17, 2025ರಂದು ನಡೆದ ಘಟನೆ ಇದಾಗಿದೆ. ಇಲ್ಲಿನ ಗೋಪಾಳ ‘ಸಿ’ ಬ್ಲಾಕ್‌ನಲ್ಲಿ ಹಗಲು ವೇಳೆಯಲ್ಲಿ ಇಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಸೆಕ್ಷನ್ 331(3), 305, ಬಿ.ಎನ್.ಎಸ್ ರಲ್ಲಿ ದಿನಾಂಕ 17/9/2025 ಕೇಸ್ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಇದೀಗ ತನಿಖಾ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಆರೋಪಿ ಆಟೋಚಾಲಕ ಅಶ್ರಫ್ ವುಲ್ಲಾ (35) ನನ್ನ ಬಂಧಿಸಿದೆ. ಈತ ಇದೇ ಗೋಪಾಳದ ವಿಶ್ವೇಶ್ವರನಗರ ನಿವಾಸಿ.
ಈತನಿಂದ ₹22,74,500 ನಗದು 130 ಗ್ರಾಂ ಚಿನ್ನದ ಆಭರಣಗಳು (ಅಂದಾಜು ಮೌಲ್ಯ ₹11,70,000)550 ಗ್ರಾಂ ಬೆಳ್ಳಿಯ ಆಭರಣಗಳು (ಅಂದಾಜು ಮೌಲ್ಯ ₹65,000) ಸೇರಿದಂತೆ ಒಟ್ಟು ಸುಮಾರು ₹35,09,500 ಮೌಲ್ಯದ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಘಟನೆ ನಡೆದ ದಿನ, ಶಿವಮೊಗ್ಗದಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಗೃಹಿಣಿಯೊಬ್ಬರು ಎಂದಿನಂತೆ ಬೆಳಗ್ಗೆ ತಮ್ಮ ಕೆಲಸಕ್ಕೆ ಪತಿಯ ಜೊತೆಗೆ ಹೋಗಿದ್ದರು. ಇವರ ಪುತ್ರಿ ಕಾಲೇಜಿಗೆ ತೆರಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದ ಮನೆಯ ಬಾಗಿಲು ತೆಗೆದಿರುವುದನ್ನ ಗಮನಿಸಿದ ಗೃಹಿಣಿ ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿತ್ತು.
ತನಿಖಾತಂಡದಲ್ಲಿ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಕಾನ್‌ಸ್ಟೆಬಲ್‌ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಂ.ಜಿ., ಮಹಿಳಾ ಕಾನ್‌ಸ್ಟೆಬಲ್‌ಗಳಾದ ಅನುಷಾ, ಚೈತ್ರಾ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಇಂದ್ರೇಶ, ಗುರು, ವಿಜಯ ಮತ್ತು ಚಾಲಕ ಪುನೀತ್ ಇದ್ದರು.
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
tunga nagara Police Crack Major Theft Case in gopala


