ವಿದ್ಯುತ್​ ಶಾಕ್​ , ಎರಡು ಹಸುಗಳು ಸಾವು

prathapa thirthahalli
Prathapa thirthahalli - content producer

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಳವಳ್ಳಿ ಗ್ರಾಮದ ಸಂಪಳ್ಳಿಯಲ್ಲಿ ಶುಕ್ರವಾರ ಸಂಜೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ದುರ್ಘಟನೆಯಲ್ಲಿ ಗಿರೀಶ್ ಎಂಬುವವರಿಗೆ ಸೇರಿದ ಸುಮಾರು 1,30,000 ರೂಪಾಯಿ ಮೌಲ್ಯದ ಹಸುಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಮನೆಯ ಸಮೀಪದಲ್ಲಿರುವ ಖಾಲಿ ಜಾಗದಲ್ಲಿ ಮೇಯುತ್ತಿದ್ದ ಮೂರು ಹಸುಗಳನ್ನು ಮನೆಗೆ ಕರೆ ತರಲು ಹೋಗಿದ್ದಾಗ, ಅವು ವಿದ್ಯುತ್ ಕಂಬದ ಸಮೀಪ ಬರುತ್ತಿದ್ದಂತೆ ವಿದ್ಯುತ್ ಪ್ರವಹಿಸಿದೆ. ಇದರಿಂದಾಗಿ ಎರಡು ಹಸುಗಳು ವಿದ್ಯುತ್ ಶಾಕ್‌ನಿಂದ ನರಳಿ ಪ್ರಾಣ ಕಳೆದುಕೊಂಡರೆ, ಮತ್ತೊಂದು ಹಸು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rippon pete

 

Share This Article