Madduru ganesha ಶಿವಮೊಗ್ಗ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ವಿರುದ್ಧ ಶಿವಮೊಗ್ಗದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯನ್ನು ಖಂಡಿಸಿ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಾಷ್ಟ್ರ ಭಕ್ತ ಬಳಗದ ವತಿಯಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಹಾಗೂ ನಾನು ಮುಸ್ಲಿಮನಾಗಿ ಹುಟ್ಟಬೇಕು ಎಂದು ಹೇಳಿಕೆ ನೀಡಿದ್ದ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ ವಿರುದ್ದ ಘೋಷನೆಯನ್ನು ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ
Madduru ganesha : ಮನವಿ ಪತ್ರದಲ್ಲಿರುವ ಪ್ರಶ್ನೆಗಳು
ಹಿಂದೂಗಳು ಗಣೇಶ ಉತ್ಸವ, ಹನುಮ ಜಯಂತಿ ಹಾಗೂ ಇತರ ಧಾರ್ಮಿಕ ಆಚರಣೆ ಹಾಗೂ ಉತ್ಸವಗಳನ್ನು ಮಾಡುವುದು ನಿಮ್ಮ ಆಡಳಿತದಲ್ಲಿ ಅಪರಾಧವೇ?
ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದೆಂದರೆ ಮಸೀದಿಗಳೇನು ಪಾಕಿಸ್ತಾನದ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲವಿಯೇ?
ಮಸೀದಿಯ ಒಳಗಡೆ ಕಲ್ಲುಗಳನ್ನು ಶೇಖರಿಸಿಟ್ಟಿರುವಂತೆ ಇನ್ನೂ ಯಾವ ಯಾವ ಮಾರಾಕಾಸ್ತ್ರಗಳನ್ನು, ಬಾಂಬ್‌ಗಳನ್ನು ಇಟ್ಟಿರಬಹುದೆಂದು ತಪಾಸಣೆ ಮಾಡುವಿರಾ?
ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ಎಸೆದು ಗಲಭೆ ಸೃಷ್ಟಿಸಲು ಕುಮ್ಮಕ್ಕು ಕೊಟ್ಟವರು ಯಾರು?
ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಇದೋಂದು ಸಣ್ಣ ಘಟನೆ ಎಂದು ಬಿಂಬಿಸುತ್ತಿರುವುದನ್ನು ನೋಡಿದರೆ ನಿಮಗೆ ಹಿಂದೂಗಳ ಹೆಣಗಳು ಬೀಳಬೇಕೆ?
ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಪೋಲೀಸರು ಮನಸೋ ಇಚ್ಛೆ ಲಾಠಿ ಪ್ರಹಾರ ಮಾಡಿ ಮಹಿಳೆಯರನ್ನೂ ಬಿಡದೆ ಹಲ್ಲೆ ಮಾಡಿರುವುದು ನಿಮ್ಮ ನಿರ್ದೇಶನದಂತೆ ನಡೆದಿದೆಯೇ?
ಯಾರ ಭಯವೂ ಇಲ್ಲದೇ ಕೆಲವು ಮುಸ್ಲಿಮರು ಪದೇ ಪದೇ ಈ ರೀತಿ ರಾಜ್ಯದಲ್ಲಿ ಗಲಭೆ, ದೊಂಬಿ, ಶತ್ರು ದೇಶದ ಪರವಾಗಿ ಘೋಷಣೆ ಕೂಗುವುದನ್ನು ನಿಯಂತ್ರಿಸಲು ನಿಮ್ಮ ಸರ್ಕಾರದಿಂದ ಸಾಧ್ಯವಿಲ್ಲವೇ?
