Dam water realese in shimogga ಶಿವಮೊಗ್ಗ, malenadu today news : August 18 2025: ಶಿವಮೊಗ್ಗದಲ್ಲಿ ಇವತ್ತು ಸಹ ಮಳೆ ಮುಂದುವರಿದಿದೆ. ಮಳೆ ಆರ್ಭಟದ ನಡುವೆ ಶಿವಮೊಗ್ಗದ ಮತ್ತೊಂದು ಪ್ರಮುಖ ಜಲಾಶಯ ಲಿಂಗನಮಕ್ಕಿ ಡ್ಯಾಮ್ ಭರ್ತಿಯಾಗುವ ಹಂತಕ್ಕೆ ಬಂದಿದೆ. ಹಾಗಾಗಿ ನಾಳೇ ಲಿಂಗನಮಕ್ಕಿ ಡ್ಯಾಮ್ನಿಂದ ನೀರು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಜಲಾನಯನ ಪ್ರದೇಶಗಳಲ್ಲಿ ವಾಹನದ ಮೂಲಕ ಮೈಕ್ ಮೂಲಕ ಅನೌನ್ಸ್ಮೆಂಟ್ ಮಾಡಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1815.05 ಅಡಿಗಳಿಗೆ ತಲುಪಿದ್ದು, ಪ್ರಸ್ತುತ 59,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾಗಾಗಿ ನೀರನ್ನು ರೇಡಿಯಲ್ ಗೇಟ್ಗಳ ಮೂಲಕ ಹೊರಕ್ಕೆ ಬಿಡಲು ನಿರ್ಧರಿಸಲಾಗಿದೆ.
ಇತ್ತ ತುಂಗಾ ಜಲಾಶಯದಿಂದ 21 ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು ಬರೊಬ್ಬರಿ 72,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆ ಮುಂದುವರಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಲ್ಲಿ 80 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಬಿಡುಗಡೆಯಾದಾಗ, ಶಿವಮೊಗ್ಗದಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಉದಾಹರಣೆಗಳಿವೆ..

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
Dam water realese in shimogga
