ಶಿವಮೊಗ್ಗ, malenadu today news : August 18 2025: ಶಿವಮೊಗ್ಗ ಪೊಲೀಸರು ಎಲ್ & ಓ ವಿಚಾರದಲ್ಲಿ ತಮ್ಮ ಚಟುವಟಿಕೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಏರಿಯಾ ಡಾಮಿನೇಷನ್, ಕಾಲ್ನಡಿಗೆ ಗಸ್ತು, ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಗಾವಲು ಹಾಗೂ ರೂಟ್ ಮಾರ್ಚ್ ಕೈಗೊಳ್ಳುತ್ತಿರುವ ಪೊಲೀಸರು ಇದೀಗ ಅಪರಿಚಿತ ಹಾಗೂ ಅನುಮಾನಸ್ಪದ ವ್ಯಕ್ತಿಗಳ ಬೇಟೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಲಾಡ್ಜ್ ಹಾಗೂ ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇಗಳಿಗೆ ವಿವಿಧ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ದಿಢೀರ್ ಭೇಟಿಕೊಟ್ಟು ತಪಾಸಣೆ ನಡೆಸಿದೆ.

ಶಿವಮೊಗ್ಗ ಜಿಲ್ಲೆ ಆಯಾ ಉಪವಿಭಾಗಕ್ಕೆ ಸಂಬಂಧಿಸಿದ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪಿಎಸ್ಐಗಳ ನೇತ್ರತೃದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯ ವೇಳೆಯಲ್ಲಿ ಹಲವು ಲಾಡ್ಜ್ಗಳಿಗೆ ಪೊಲೀಸರು ಭೇಟಿಕೊಟ್ಟು ಪರಿಶೀಲಿನೆ ನಡೆಸಿದ್ದಾರೆ. ಅಲ್ಲದೆ ಲಾಡ್ಜ್ ಮತ್ತು ಪಿ.ಜಿ.ಗಳಲ್ಲಿ ತಂಗಿರುವ ಗ್ರಾಹಕರ ವಿವರಗಳನ್ನು ಪರಿಶೀಲಿಸಿ, ಸಿಬ್ಬಂದಿ ಬಳಿ ಮಾಹಿತಿ ಪಡೆದಿದ್ದಾರೆ. ಜೊತೆಯಲ್ಲಿ ರಿಜಿಸ್ಟರ್ ಮಾಹಿತಿಯನ್ನು ಚೆಕ್ ಮಾಡಿ, ಸಿಸಿಟಿವಿ ಕ್ಯಾಮೆರಾಗಳು ವರ್ಕ್ ಆಗುತ್ತಿದೆ ಎಂಬುದನ್ನು ಸಹ ನೋಡಿದ್ದಾರೆ. ಇವೆಲ್ಲದರ ಜೊತೆಗೆ ಕಳೆದ 15 ದಿನಗಳಲ್ಲಿ ತಂಗಿದ್ದ ಗ್ರಾಹಕರ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಇದೇ ವೇಳೆ ಲಾಡ್ಜ್ , ಪಿಜಿ , ಹಾಗೂ ಹೋಂ ಸ್ಟೇ ಮಾಲೀಕರಿಗೆ ಕೆಲವೊಂದು ಸೂಚನೆ ನೀಡಿದ್ದಾರೆ.
- ಗ್ರಾಹಕರ ಹೆಸರು, ವಿಳಾಸ, ಮತ್ತು ಮೊಬೈಲ್ ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
- ಗ್ರಾಹಕರು ನೀಡುವ ಮೊಬೈಲ್ ಸಂಖ್ಯೆ ಅವರದ್ದೇ ಎಂದು ಖಚಿತಪಡಿಸಿಕೊಳ್ಳಬೇಕು.
- ಗ್ರಾಹಕರ ಗುರುತು ಚೀಟಿಯ (ಐಡಿ ಕಾರ್ಡ್) ಜೆರಾಕ್ಸ್ ಪ್ರತಿಯನ್ನು ಪಡೆಯಬೇಕು.
- ಗ್ರಾಹಕರು ತಂಗಲು ಬಂದಿರುವ ಉದ್ದೇಶವನ್ನು ತಿಳಿದು ಅದನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು.
- ಯಾವುದೇ ಗ್ರಾಹಕರ ಬಗ್ಗೆ ಅನುಮಾನ ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಶುಭ ಸೋಮವಾರ! ಇವತ್ತಿನ ದಿನಭವಿಷ್ಯ ವಿಶೇಷ!? https://malenadutoday.com/monday-horoscope-special/
