Kumsi police station ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kumsi police station ಎಫ್ಐಆರ್ ನಲ್ಲಿ ಏನಿದೆ
ಆಗಸ್ಟ್ 1 ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಒಬ್ಬ ಮಹಿಳೆ ಪ್ರಯಾಣಿಸುತ್ತಿದ್ದರು. ಅವರು ಕಂಡಕ್ಟರ್ ಬಳಿ ಚೋರಡಿ ಸ್ಟಾಪ್‌ನಲ್ಲಿ ನಿಲ್ಲಿಸುವಂತೆ ಕೇಳಿದಾಗ, ಕಂಡಕ್ಟರ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ನಂತರ ಚೋರಡಿ ಬಳಿ ಬಸ್ ನಿಲ್ಲಿಸಿ ಆ ಮಹಿಳೆಯನ್ನು ಇಳಿಸಲಾಗಿದೆ.
ಈ ಘಟನೆಯ ಮರುದಿನವೂ ಅದೇ ಮಹಿಳೆ ಅದೇ ಬಸ್ ಹತ್ತಿ ಚೋರಡಿ ಸ್ಟಾಪ್‌ನಲ್ಲಿ ಇಳಿದಿದ್ದಾರೆ. ಆಗ ಅಲ್ಲಿ ಕಾಯುತ್ತಿದ್ದ 10-15 ಜನರ ಗುಂಪೊಂದು ಬಸ್ ಚಾಲಕನನ್ನು ಹೊರಗೆ ಎಳೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಊರಿನವರಿಗೆ ಬಸ್ ಏಕೆ ನಿಲ್ಲಿಸುವುದಿಲ್ಲ ಎಂದು ಹಲ್ಲೆ ಮಾಡಿದ್ದಾರೆ ಎಂಬುವುದಾಗಿ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ. ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಚಾಲಕ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.