prajwal revanna : ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ, ಪ್ರಜ್ವಲ್ ರೇವಣ್ಣಾಗೆ ಜೀವಾವಧಿ ಶಿಕ್ಷೆ
ಮೈಸೂರಿನ ಕೆ.ಆರ್. ನಗರದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಾಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧಿಶ ಸಂತೋಷ ಗಜಾನನ ಭಟ್ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ.
prajwal revanna ಕೋರ್ಟ್ನಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು
ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು, ಈ ಪ್ರಕರಣದ ಬಗ್ಗೆ ನಿಮ್ಮ ಹೇಳಿಕೆ ಏನು ಎಂದು ಪ್ರಜ್ವಲ್ ರೇವಣ್ಣ ಅವರನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಜ್ವಲ್, “ನಾನು ನ್ಯಾಯಾಲಯಕ್ಕೆ ತಲೆಬಾಗುತ್ತೇನೆ. ಚುನಾವಣಾ ಸಮಯದಲ್ಲಿ ರಾಜಕೀಯ ಷಡ್ಯಂತ್ರದಿಂದ ನನ್ನ ಮೇಲೆ ಈ ರೀತಿಯ ಆರೋಪ ಮಾಡಲಾಗಿದೆ. ನಾನು ರಾಜಕೀಯಕ್ಕೆ ಬಂದಿದ್ದೇ ತಪ್ಪು. ಅಲ್ಪಾವಧಿಯಲ್ಲಿ ನಾನು ರಾಜಕೀಯದಲ್ಲಿ ಬೆಳೆದಿದ್ದನ್ನು ಕಂಡು ಹೀಗೆ ಮಾಡಲಾಗಿದೆ. ನಾನು ಇಷ್ಟು ವರ್ಷ ಸಂಸದನಾಗಿದ್ದಾಗ ಯಾರೂ ನನ್ನ ಮೇಲೆ ಆರೋಪಿಸಿರಲಿಲ್ಲ, ಆದರೆ ಈಗ ಆರೋಪಿಸಲು ಕಾರಣವೇನು” ಎಂದು ಹೇಳಿದ್ದಾರೆ.
ಹಾಗೆಯೇ ನಾನು ನನ್ನ ತಂದೆ ತಾಯಿಯ ಮುಖ ನೋಡಿ 6 ತಿಂಗಳಾಗಿದೆ ಎಂದು ಕಣ್ಣೀರಿಟ್ಟರು .ಈ ವೇಳೆ ನ್ಯಾಯಾಧೀಶರು,ನಿಮ್ಮ ವಿದ್ಯಾರ್ಹತೆ ಏನು ಪ್ರಶ್ನಿಸಿದರು ಅದಕ್ಕೆ ಉತ್ತರಿಸಿದ ಪ್ರಜ್ವಲ್, “ಬಿ.ಇ ಇನ್ ಮೆಕ್ಯಾನಿಕಲ್” ಎಂದು ಉತ್ತರಿಸಿದರು.
ಇದೀಗ ಬಂದ ಕೋರ್ಟ್ ತೀರ್ಪುನಿಂದ ಪ್ರಜ್ವಲ್ಗೆ ಶಾಕ್ ಎದುರಾಗಿದ್ದು, ಈ ಹಿನ್ನೆಲೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಪ್ರಜ್ವಲ್ ರೇವಣ್ಣ ಈ ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದ್ದಾರ ಎಂದು ಕಾದು ನೋಡಬೇಕಿದೆ.
