OTT Platform
Indian Government Bans Over 20 OTT Platforms ನವದೆಹಲಿ: ಇತ್ತೀಚೆಗೆ ಅಶ್ಲೀಲ ಒಟಿಟಿಗಳ ಸಂಖ್ಯೆ ವಿಪರೀತವಾಗಿದ್ದವು, ಅಲ್ಲದೆ ಅಶ್ಲೀಲ ವಿಡಿಯೋಗಳ ದೊಡ್ಡ ಮಾರುಕಟ್ಟೆಯನ್ನ ಈ ಒಟಿಟಿ ಸೃಷ್ಟಿ ಮಾಡಿತ್ತು.
ಇದೀಗ ಇಂತಹ ಓಟಿಟಿಗಳ ಮೇಲೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿದ ಆರೋಪ ಹಾಗೂ ಮತ್ತು ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ULLU, ALTT ಮತ್ತು ಡೆಸಿಫ್ಲಿಕ್ಸ್ ಸೇರಿದಂತೆ 20ಕ್ಕೂ ಹೆಚ್ಚು ಒಟಿಟಿ (ಓವರ್-ದಿ-ಟಾಪ್) ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ ಎನ್ನಲಾಗಿದೆ.
ಡಿಜಿಟಲ್ ಪ್ಲಾಟ್ಫಾರಮ್ಗಳಲ್ಲಿ ಸಭ್ಯತೆಯನ್ನು ಕಾಯ್ದುಕೊಳ್ಳುವ ಹಾಗೂ ಅಪ್ರಾಪ್ತರನ್ನು ಇಂತಹ ಪ್ಲಾಟ್ಫಾರಮ್ಗಳು ತಲುಪು ಸಾಧ್ಯತೆ ಇರುವುದರಿಂದ ಇವುಗಳನ್ನು ಕಾನೂನಿನ ಮಿತಿಯೊಳಗೆ ತರುವ ಸಲುವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.



ALTT, ULLU, ಬಿಗ್ ಶಾಟ್ಸ್ ಅಪ್ಲಿಕೇಶನ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಅಪ್ಲಿಕೇಶನ್, ಕಂಗನ್ ಅಪ್ಲಿಕೇಶನ್, ಬುಲ್ ಅಪ್ಲಿಕೇಶನ್, ಜಲ್ವಾ ಅಪ್ಲಿಕೇಶನ್, ವಾವ್ ಎಂಟರ್‌ಟೈನ್‌ಮೆಂಟ್, ಲುಕ್ ಎಂಟರ್‌ಟೈನ್‌ಮೆಂಟ್, ಹಿಟ್‌ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್‌ಎಕ್ಸ್ ವಿಐಪಿ, ಹಲ್ಚುಲ್ ಅಪ್ಲಿಕೇಶನ್, ಮೂಡ್‌ಎಕ್ಸ್, ನಿಯಾನ್‌ಎಕ್ಸ್ ವಿಐಪಿ, ಫ್ಯೂಗಿ, ಮೊಜ್‌ಫ್ಲಿಕ್ಸ್ ಮತ್ತು ಟ್ರಿಫ್ಲಿಕ್ಸ್ ಸೇರಿದಂತೆ ಹಲವು ಆನ್ಲೈನ್ ಡಿಜಿಟಲ್ ಪ್ಲಾಟ್ಫಾರಮ್ಗಳಿವೆ ಎನ್ನಲಾಗಿದೆ.

ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP) ಭಾರತದೊಳಗೆ ಈ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡದಂತೆ ಸೂಚಿಸಿದೆ.