Prepaid Auto Counters Shimoga Railway Station Sep 1 ಸೆಪ್ಟೆಂಬರ್ 1ರಿಂದ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ ಆರಂಭ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Prepaid Auto Counters Shimoga Railway Station Sep 1 ಶಿವಮೊಗ್ಗ, ಜುಲೈ 25 (ಮಲೆನಾಡು ಟುಡೆ ಸುದ್ದಿ): ಸಾರ್ವಜನಿಕ ಆಟೋ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಕಿರಿಕಿರಿಯನ್ನು ನಿವಾರಿಸಿ, ಸುಗಮ ಸಂಚಾರ ವ್ಯವಸ್ಥೆ [Smooth traffic system] ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದೆ. ಸೆಪ್ಟೆಂಬರ್ 01ರಿಂದಲೇ ಅನ್ವಯವಾಗುವಂತೆ, ನಗರದ ರೈಲ್ವೇ ನಿಲ್ದಾಣದಿಂದ ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್‌ಗಳ ಆರಂಭದ ಕುರಿತು ನಡೆದ ಸಂಬಂಧಿತ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸ್, ಸಾರಿಗೆ, ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಈ ಪ್ರೀಪೇಯ್ಡ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಅದಕ್ಕೂ ಮುನ್ನ ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯವನ್ನು ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.


ರೈಲ್ವೇ ನಿಲ್ದಾಣದಲ್ಲಿ ಮೂರು ಕೌಂಟರ್‌ಗಳ ಸ್ಥಾಪನೆ / Prepaid Auto Counters Shimoga Railway Station Sep 1
ಆರಂಭಿಕ ಹಂತದಲ್ಲಿ ರೈಲ್ವೇ ನಿಲ್ದಾಣದಲ್ಲಿ ಆಯ್ದ ಮೂರು ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಗರದ ಸ್ಥಳೀಯ ಸ್ವಯಂಸೇವಾ ಸಂಸ್ಥೆ ‘ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ’ಯ ವ್ಯವಸ್ಥಾಪಕರು ಆಸಕ್ತಿ ತೋರಿಸಿದ್ದು, ಈಗಾಗಲೇ ಅದರ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸಹಕಾರವನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಈ ಪ್ರೀಪೇಯ್ಡ್ ಆಟೋ ಕೌಂಟರ್‌ಗಳ ಆರಂಭದಿಂದ ನಗರದ ಸಾರ್ವಜನಿಕರು ಹಾಗೂ ನೆರೆಯ ಜಿಲ್ಲೆ, ತಾಲ್ಲೂಕುಗಳಿಂದ ವಿವಿಧ ಉದ್ದೇಶಗಳಿಗಾಗಿ ನಗರಕ್ಕೆ ಆಗಮಿಸುವವರಿಗೆ ಹೆಚ್ಚಿನ ಅನುಕೂಲ [More convenience] ಆಗಲಿದೆ. ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ನಗರದಲ್ಲಿ ಶಿಸ್ತು ಮೂಡಲಿದೆ. ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ಈ ವ್ಯವಸ್ಥೆ ಯಶಸ್ವಿಯಾದಲ್ಲಿ, ನಗರದ ಎಲ್ಲಾ ಪ್ರಮುಖ ವೃತ್ತಗಳು ಮತ್ತು ಜನನಿಬಿಡ ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಆಟೋ ಚಾಲಕರ ಸಂಘದ ಪ್ರಮುಖ ಬೇಡಿಕೆಗಳು
ಸಭೆಯಲ್ಲಿ ಉಪಸ್ಥಿತರಿದ್ದ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಹೊಸದಾಗಿ ಪ್ರವೇಶಿಸುತ್ತಿರುವ ಆಟೋಗಳಿಗೆ ನೀಡಲಾಗುತ್ತಿರುವ ಪರವಾನಗಿಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಮಹಾವೀರ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಭಿಕ್ಷೆ ಯಾಚಿಸುವವರು, ವಸ್ತುಗಳ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಆಕಸ್ಮಿಕ ಅಪಘಾತಗಳು ಸಂಭವಿಸುತ್ತಿದ್ದು, ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಮನಹರಿಸಬೇಕು ಎಂದರು.
Prepaid Auto Counters Shimoga Railway Station Sep 1