Mescom No Online Services for 2 days 2 ದಿನ ಮೆಸ್ಕಾಂ ಆನ್‌ಲೈನ್ ಸೇವೆಗಳು ಅಲಭ್ಯ: ಯಾವಾಗ!? ಏನೆಲ್ಲಾ ಇರಲ್ಲ
ಶಿವಮೊಗ್ಗ: ಮೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ಆನ್‌ಲೈನ್ ಸೇವೆಗಳು (Online Services) ಜುಲೈ 25 ರ ರಾತ್ರಿ 8:30 ರಿಂದ ಜುಲೈ 27 ರ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ಆನ್‌ಲೈನ್ ಟೆಕ್ನಿಕಲ್ ವರ್ಕ್ ಕಾರಣಕ್ಕೆ ಎರಡು ದಿನ ಆನ್‌ಲೈನ್ ಸೇವೆಗಳು ಇರುವುದಿಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅವಧಿಯಲ್ಲಿ ವಿದ್ಯುತ್ ಬಿಲ್‌ಗಳ ಪಾವತಿ (Electricity Bill Payments), ಹೊಸ ಸಂಪರ್ಕ ಸೇವೆ (New Connection Services), ಹೆಸರು ಮತ್ತು ವಿಳಾಸ ಬದಲಾವಣೆ (Name and Address Change) ಸೇರಿದಂತೆ ಎಲ್ಲಾ ಆನ್‌ಲೈನ್ ಆಧಾರಿತ ಸೇವೆಗಳು ಅಲಭ್ಯವಾಗಲಿವೆ.



ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು RAPDRP (Restructured Accelerated Power Development and Reforms Programme) ನಗರ ಪ್ರದೇಶಗಳ ಗ್ರಾಹಕರಿಗೆ ಈ ಸೇವೆಗಳು ಲಭ್ಯವಿರುವುದಿಲ್ಲ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.
Mescom No Online Services for 2 days
ಮೆಸ್ಕಾಂ, ಆನ್‌ಲೈನ್ ಸೇವೆಗಳು, online Services, Power Outage, Shivamogga, #OnlineServices #Karnataka #ElectricityUpdate