Snake Rescue Shivamogga ಶಿಕ್ಷಕಿಯ ಸ್ಕೂಟರ್‌ನಲ್ಲಿ ಅಡಗಿತ್ತು ಹಾವು : ಸ್ನೇಕ್ ಕಿರಣ್‌ನಿಂದ ಸುರಕ್ಷಿತ ರಕ್ಷಣೆ
ಶಿವಮೊಗ್ಗ: ನಗರದ ಗಾಡಿಕೊಪ್ಪದಲ್ಲಿರುವ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯ ಸ್ಕೂಟಿಯಲ್ಲಿ ಅಡಗಿದ್ದ ಕಂದು ಬಣ್ಣದ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಶಿಕ್ಷಕಿ ಶಾಲೆಯಲ್ಲಿ ಗಾಡಿ ನಿಲ್ಲಿಸಿದ್ದಾಗ ವಿಷ ರಹಿತ ಕೆರೆ ಹಾವೊಂದು ಬೈಕ್ನ ಸ್ಟ್ಯಾಂಡ್ ಮುಖಾಂತರ ಚಾರ್ಸಿ ಒಳಗೆ ನುಗ್ಗಿದೆ. ಇದನ್ನು ಶಾಲಾ ಶಿಕ್ಷಕರು ಗಮನಿಸಿ ಹಾವನ್ನು ಹೊರಹಾಕಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾದ ನಂತರ, ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ..
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಸ್ಕೂಟರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ, ಅದರ ಭಾಗಗಳನ್ನು ಬಿಚ್ಚಿ ಹಾಕಿ, ಸತತ ಪ್ರಯತ್ನಗಳ ನಂತರ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ

ಈ ಕುರಿತು ಮಾತನಾಡಿದ ಸ್ನೇಕ್ ಕಿರಣ್, “ಇದು ವಿಷರಹಿತ ಕೆರೆ ಹಾವಾಗಿದೆ.ಸಾರ್ವಜನಿಕರು ವಾಹನಗಳನ್ನು ಚಲಾಯಿಸುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮ ಎಂದು ಸಲಹೆ ನೀಡಿದರು.
