Tirupati Chikkamagaluru Express ಚಿಕ್ಕಮಗಳೂರು, ಜುಲೈ 12, 2025: ಬಹುನಿರೀಕ್ಷಿತ ತಿರುಪತಿ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ (ಶುಕ್ರವಾರ, ಜುಲೈ 11) ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿದರು. ಈ ಹೊಸ ರೈಲು ಸೇವೆ ಚಿಕ್ಕಮಗಳೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಭಕ್ತಾದಿಗಳಿಗೆ ತಿರುಪತಿಗೆ ನೇರ ಮತ್ತು ಸುಲಭ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
Tirupati Chikkamagaluru Express ವೃದ್ಧ ಮಹಿಳೆಯ ವಿಶೇಷ ನಮನ:
ಚಿಕ್ಕಮಗಳೂರಿನಿಂದ ಹೊರಟ ರೈಲಿಗೆ ಹಿರೇಮಗಳೂರಿನ ಲಕ್ಷ್ಮಿಬಾಯಿ ಎಂಬ ವೃದ್ಧ ಮಹಿಳೆ ರೈಲು ಕಂಬಿಗಳ ಮೇಲೆ ಇಳಿದು ಅಡ್ಡಬಿದ್ದು ನಮಸ್ಕರಿಸಿದ್ದು, ಹೊಸ ರೈಲಿನ ಬಗ್ಗೆ ಜನರಲ್ಲಿದ್ದ ಸಂಭ್ರಮವನ್ನು ಎತ್ತಿ ತೋರಿಸಿತು. “ವರ್ಷದಲ್ಲಿ ಮೂರು-ನಾಲ್ಕು ಬಾರಿ ತಿರುಪತಿಗೆ ಹೋಗುತ್ತಿದ್ದೆ. ಈಗ ಚಿಕ್ಕಮಗಳೂರಿನಿಂದ ನೇರ ರೈಲು ಸಂಚಾರ ಆರಂಭವಾಗಿರುವುದು ಸಂತಸ ತಂದಿದೆ” ಎಂದು ಅವರು ತಮ್ಮ ಸಂತಸ ವ್ಯಕ್ತಪಡಿಸಿದರು.
Tirupati Chikkamagaluru Express ರೈಲು ಸಂಚಾರದ ವಿವರಗಳು:
ಈ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಒಂದು ದಿನ ಸಂಚರಿಸಲಿದೆ.

ತಿರುಪತಿಯಿಂದ ಚಿಕ್ಕಮಗಳೂರು ಕಡೆಗೆ (ಗುರುವಾರ):
ತಿರುಪತಿಯಿಂದ ಗುರುವಾರ ರಾತ್ರಿ 9:00ಕ್ಕೆ ಹೊರಡುತ್ತದೆ.
ಪ್ರಮುಖ ನಿಲುಗಡೆಗಳು ಮತ್ತು ಆಗಮನ ಸಮಯ:
ಪಳಕ (9:28 PM)
ಚಿತ್ತೂರು (9:58 PM)
ಕಟ್ಪಾಡಿ (11:10 PM)
ಜೋಲಾರಪೇಟೆ (ಶುಕ್ರವಾರ 12:28 AM)
ಕುಪ್ಪಂ (1:10 AM)
ಬಂಗಾರಪೇಟೆ (1:39 AM)
ವೈಟ್‌ಫೀಲ್ಡ್ (2:10 AM)
ಕೆ.ಆರ್.ಪುರ (2:23 AM)
ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ (3:05 AM)
ಚಿಕ್ಕಬಾಣಾವರ (3:50 AM)
ತುಮಕೂರು (4:43 AM)
ಸಂಪಿಗೆ ರಸ್ತೆ (6:15 AM)
ತಿಪಟೂರು (5:58 AM)
ಅರಸೀಕೆರೆ (7:30 AM)
ದೇವನೂರು (8:10 AM)
ಕಡೂರು (8:26 AM)
ಬೀರೂರು (8:50 AM)
ಬಿಸ್ಲೇಹಳ್ಳಿ (9:26 AM)
ಸಖರಾಯಪಟ್ಟಣ (9:39 AM)
ಅಂತಿಮವಾಗಿ ಚಿಕ್ಕಮಗಳೂರು ತಲುಪುವ ಸಮಯ: ಬೆಳಿಗ್ಗೆ 10:30 AM.
ಚಿಕ್ಕಮಗಳೂರಿನಿಂದ ತಿರುಪತಿ ಕಡೆಗೆ (ಶುಕ್ರವಾರ):
ಚಿಕ್ಕಮಗಳೂರಿನಿಂದ ಅದೇ ದಿನ (ಶುಕ್ರವಾರ) ಸಂಜೆ 5:30 PM ಕ್ಕೆ ಹೊರಡುತ್ತದೆ.
Tirupati Chikkamagaluru Express ಪ್ರಮುಖ ನಿಲುಗಡೆಗಳು ಮತ್ತು ಆಗಮನ ಸಮಯ:
ಸಖರಾಯಪಟ್ಟಣ (6:04 PM)
ಬಿಸ್ಲೇಹಳ್ಳಿ (6:17 PM)
ಕಡೂರು (6:28 PM)
ಬೀರೂರು (6:45 PM)
ದೇವನೂರು (7:25 PM)
ಅರಸೀಕೆರೆ (7:50 PM)
ತಿಪಟೂರು (8:20 PM)
ತುಮಕೂರು (9:18 PM)
ಚಿಕ್ಕಬಾಣಾವರ (10:00 PM)
ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ (ಶನಿವಾರ 12:05 AM)
ಕೆ.ಆರ್.ಪುರ (12:40 AM)
ವೈಟ್‌ಫೀಲ್ಡ್ (12:51 AM)
ಬಂಗಾರಪೇಟೆ (1:23 AM)
ಕುಪ್ಪಂ (1:55 AM)
ಜೋಲಾರಪೇಟೆ (3:25 AM)
ಕಟ್ಪಾಡಿ (5:00 AM)
ಚಿತ್ತೂರು (5:43 AM)
ಪಳಕ (6:13 AM)
ಅಂತಿಮವಾಗಿ ತಿರುಪತಿ ತಲುಪುವ ಸಮಯ: ಬೆಳಿಗ್ಗೆ 7:40 AM.
ಈ ಹೊಸ ರೈಲು ಸೇವೆ ಚಿಕ್ಕಮಗಳೂರು ಮತ್ತು ತಿರುಪತಿ ನಡುವೆ ಪ್ರಯಾಣಿಸುವ ಸಾವಿರಾರು ಭಕ್ತಾದಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲಕರವಾದ ಆಯ್ಕೆಯಾಗಲಿದೆ.
