Sigandur Launch Steering Lock Breaks, Passengers Panicked ಸಿಗಂದೂರು ಲಾಂಚ್ ಸ್ಟೇರಿಂಗ್ ಲಾಕ್ ತುಂಡಾಗಿ ಪ್ರಯಾಣಿಕರಿಗೆ ಆತಂಕ
july 04 Shivamogga news : ನಿನ್ನೆ ದಿನ ಶರಾವತಿ ಹಿನ್ನೀರಿನಲ್ಲಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಏನು ಸಹ ಆಗಲಿಲ್ಲ. ಆದರೆ ಘಟನೆ ಕೆಲ ಕಾಲ ಆತಂಕ ಹುಟ್ಟಿಸಿತ್ತು. ಹೌದು ಹೊಳೆಬಾಗಿಲು ಭಾಗದಿಂದ ಅಂಬಾರಗೋಡ್ಲು ದಡಕ್ಕೆ ಹೋಗುತ್ತಿದ್ದ ಲಾಂಚ್ ಒಂದು ಹಿನ್ನೀರಿನ ನಡುವೆಯೇ ಕೆಟ್ಟು ನಿಂತಿತ್ತು.
ಸಿಗಂದೂರು ಲಾಂಚ್ಗಳಲ್ಲಿ ಒಂದಾದ ಶರಾವತಿ-1ರ ಸ್ಟೇರಿಂಗ್ ಲಾಕ್ ತುಂಡಾದ ಪರಿಣಾಮ, ಅದು ಹಿನ್ನೀರಿನ ನಡುವೆಯೇ ಕೆಟ್ಟು ನಿಂತಿತು. ಇನ್ನೂ ಸ್ಟೇರಿಂಗ್ ಕಟ್ ಆದ ಹಿನ್ನೆಲೆಯಲ್ಲಿ ಮಳೆ ಗಾಳಿಗೆ ಲಾಂಚ್ ದಿಕ್ಕು ತಪ್ಪಲು ಆರಂಭಿಸಿತು. ಇದರಿಂದ ಲಾಂಚ್ನಲ್ಲಿ ಪ್ರಯಾಣಿಕರಿಗೆ ಆತಂಕ ಉಂಟಾಗಿತ್ತು.

ಘಟನೆ ಬೆನ್ನಲ್ಲೆ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದ ಬೋಟ್ವೊಂದನ್ನ ಬಳಸಿಕೊಂಡು ಶರಾವತಿ ಲಾಂಚ್ನ್ನ ಹಗ್ಗ ಕಟ್ಟಿ ದಡಕ್ಕೆ ಎಳೆದುಕೊಂಡು ಬರಲಾಯ್ತು. ತಕ್ಷಣವೇ ಈ ಕ್ರಮ ಕೈಗೊಂಡಿದ್ದರಿಂದ ಯಾರಿಗೂ ಅಪಾಯ ಉಂಟಾಗಲಿಲ್ಲ. ಇನ್ನೂ ಲಾಂಚ್ ಕೆಟ್ಟಿದ್ದರಿಂದ ಮಳೆಯ ನಡುವೆ ಜನರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ


View this post on Instagram