riprakeshPoojari / ಹಾಸ್ಯ ನಟ ರಾಕೇಶ್ ಪೂಜಾರಿ ಅಕಾಲಿಕ ನಿಧನ: ಕನ್ನಡ ಮನರಂಜನಾ ವಲಯಕ್ಕೆ ದುಃಖದ ಆಘಾತ

Malenadu Today

riprakeshPoojari /   ಕಾಮಿಡಿ ಕಿಲಾಡಿ ಸೀಸನ್- 3ರಲ್ಲಿ ಫೇಮಸ್ ಆಗಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದಾಗ್ಯು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಸದ್ಯ ಅವರು ರಿಷಭ್​ ಶೆಟ್ಟಿ ಸಿನಿಮಾ ಕಾಂತಾರ ಫ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಿದ್ದರು.   

  • ಕಾರಣ: ಹೃದಯಾಘಾತ (ಕಾರ್ಕಳದಲ್ಲಿ ಮದುವೆ ಸಮಾರಂಭದಲ್ಲಿ ಕುಸಿದು ಬಿದ್ದಿದ್ದು)
  • ವಯಸ್ಸು: 33 ವರ್ಷ
  • ಪ್ರಸಿದ್ಧ ಪಾತ್ರಗಳು:
  • ಕಾಂತಾರ ಫ್ರೀಕ್ವೆಲ್ (ರಿಷಭ್ ಶೆಟ್ಟಿ ನಿರ್ದೇಶನ)
  • ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ “ವಿರೂಪಾಕ್ಷ”
  • ಪೈಲ್ವಾನ್, ಇದು ಎಂಥಾ ಲೋಕವಯ್ಯ ಸಿನಿಮಾಗಳು

ಕಾಂತಾರ 1 ಸಿನಿಮಾ ಶೂಟಿಂಗ್​ನಲ್ಲಿಯೇ ಅಸ್ವಸ್ಥರಾಗುತ್ತಿದ್ದ ರಾಕೇಶ್​ರವರು ಅದನ್ನು ನಿರ್ಲಕ್ಷ್ಯಿಸಿದ್ದರು ಎನ್ನಲಾಗಿದೆ. ಊಟ ನಿದ್ರೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಅನಾರೋಗ್ಯವಾಗುತ್ತಿದೆ ಎಂದುಕೊಂಡಿದ್ದ ಅವರು, ಕಾರ್ಕಳದಲ್ಲಿ ಮದುವೆಯೊಂದಕ್ಕೆ ಹೋಗಿದ್ದಾಗ ಕುಸಿದುಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಹೃದಯಾಘಾತ ಆಗಿದೆ ಎಂದಿದ್ದಾರೆ. ಬಳಿಕ ರಾಕೇಶ್​ ಪೂಜಾರಿ ಸಾವನ್ನಪ್ಪಿದರು ಎಂದು ವೈದ್ಯರು ದೃಢಿಕರಿಸಿದರು.

riprakeshPoojari  no more
riprakeshPoojari  no more

riprakeshPoojari  no more

33 ವರ್ಷದ ರಾಕೇಶ್​ಗೆ ತಾಯಿ ಹಾಗೂ ಸಹೋದರಿಯ ಇದ್ದು ಮನೆಗೆ ಆಧಾರಸ್ತಂಭ ಆಗಿದ್ದರು. ಇಡೀ ಮನೆಯ ಜವಾಬ್ದಾರಿ ರಾಕೇಶ್ ಮೇಲಿತ್ತು.  ರಾಕೇಶ್ ಪೂಜಾರಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ನಾಟಕದಲ್ಲಿ ಅಭಿನಯಿಸಿದ್ದಾರೆ 

 

 

Share This Article