mock drill india : ಶಿವಮೊಗ್ಗದಲ್ಲಿಯು ನಡೆಯಿತು ರಕ್ಷಣಾ ತಾಲೀಮು!

Malenadu Today

mock drill india ದೇಶದೆಲ್ಲೆಡೆ ಇವತ್ತು ಯುದ್ಧದ ಸಂದರ್ಭದಲ್ಲಿ ನಡೆಸುವ ಸುರಕ್ಷತಾ ಕವಾಯತು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿಯು ಸುರಕ್ಷತಾ ತಾಲೀಮು ನಡೆದಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್‌ ಡ್ರಿಲ್‌ ನಡಸಲಾಗಿದೆ. ಯುದ್ದದ ಸಂದರ್ಭದಲ್ಲಿ ಸನ್ನಿವೇಶಗಳು ಹೇಗಿರುತ್ತದೆ? ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಸ್ವಯಂರಕ್ಷಣೆ ಹೇಗೆ ಮಾಡಿಕೊಳ್ಳಬೇಕು. ಇತರರನ್ನು ಹೇಗೆ ರಕ್ಷಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿಸಿಕೊಡಲಾಯಿತು.ಸ್ವರಕ್ಷಣಾ ಕವಾಯತಿನ ಅಂಗವಾಗಿ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್‌ ಶಬ್ದ ಮೊಳಗಿಸಲಾಯ್ತು. ಆ ತಕ್ಷಣವೇ ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕೂಡಲೆ ತಮ್ಮ ತಮ್ಮ ರಕ್ಷಣೆಗೆ ಮುಂದಾಗುತ್ತಾರೆ. ಬಳಿಕ  ಬೆಂಚ್‌, ಟೇಬಲ್‌ಗಳ ಅಡಿಯಲ್ಲಿ ಹಾಗೂ ನೆಲದ ಮೇಲೆ ಮಲಗಿ ತಮ್ಮನ್ನು ರಕ್ಷಣೆಮಾಡಿಕೊಳ್ಳುತ್ತಾರೆ. ಈ ಸನ್ನಿವೇಶದ ಬಳಿಕ, ಸಾಂದರ್ಭಿಕವಾಗಿ ಯುದ್ಧದ ಸಂದರ್ಭದಲ್ಲಿ ಗಾಯಗೊಂಡವರನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆಯು ಪ್ರಾತಕ್ಷಿತೆ ನೀಡಲಾಯ್ತು. 

mock drill india
mock drill india in shivamogga
mock drill india
mock drill shivamogga
Share This Article