malnad weather today | ಈ ವಾರವಿಡಿ ಇದೆ ಮಳೆ! ಎಲ್ಲೆಲ್ಲಿ ಇರಲಿದೆ ಅಬ್ಬರ! ಓ

Malenadu Today

malnad weather today | ಮೆಲ್ಲೆಗೆ ಮಳೆ ಆಗಮಿಸುತ್ತಿದೆ, ರಾಜ್ಯದ ಹವಾಮಾನ ಇಲಾಖೆಯ ಪ್ರಕಾರ, ಈ ವಾರವಿಡಿ ಹಲವೆಡೆ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯ ಹವಾಮಾನ ಇಲಾಖೆ ಬೆಂಗಳೂರು  (ಐಎಂಡಿ) ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಕಾಲ ಗಾಳಿ,ಮಳೆ ಎರಡು ಜೋರಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ನಡುವೆ ಇವತ್ತು ಅಂದರೆ, ಕೆಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಿದೆ.

malnad weather today, ಎಲ್ಲೆಲ್ಲಿ ಮಳೆ

ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗವೂ  ಸೇರಿದಂತೆ ಬಳ್ಳಾರಿಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ, ನಾಳೆಯಿಂದ ಚಿತ್ರದುರ್ಗ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

 

Share This Article