railway underpass: ಶಿವಮೊಗ್ಗ P&T ಕಾಲೊನಿಲ್ಲಿರುವ ರೈಲ್ವೆ ಅಂಡರ್ ಪಾಸ್ ಡ್ರೈನೇಜ್ನಲ್ಲಿ ನೀರು ಸೋರಿಕೆಯಾಗುತ್ತಿದ್ದು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೂರನ್ನು ವ್ಯಕ್ತಪಡಿಸಿದ್ದಾರೆ.
railway underpass : ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯ
ಪಿ & ಟಿ ಕಾಲೋನಿಯ ಅಂಡರ್ ಪಾಸ್ನಲ್ಲಿ ಡ್ರೈನಜ್ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದಾಗಿ ಅಂಡರ್ ಪಾಸ್ನಲ್ಲಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲದೆ ಅಂಡರ್ ಪಾಸ್ನಲ್ಲಿ ಗಲೀಜು ತುಂಬಿಕೊಳ್ಳುತ್ತಿದೆ. ಈ ಬಗ್ಗೆ ಪಬ್ಲಿಕ್ ಒಬ್ಬರು ಫೋಟೋಗಳನ್ನು ತಮ್ಮ ಟ್ವಿಟ್ಟರ್ ಪೋಸ್ಟ್ನಲ್ಲಿ ಅಪ್ಲೋಡ್ ಮಾಡಿದ್ದು, ದ್ವಿಚಕ್ರ ವಾಹನ ಸವಾರರರು ಹಾಗೂ ಸಾರ್ವಜನಿಕರಿಗೆ ಒಡಾಡಲು ಬಹಳ ತೊಂದರೆ ಉಂಟಾಗುತ್ತಿದೆ, ಈ ಹಿನ್ನಲೆ ಶೀಘ್ರ ಕ್ರಮ ಕೈಗೊಳ್ಳಿ ಎಂದು ಸಂಸದ ಹಾಗೂ ಎಂಎಲ್ಎಯವರ ಟ್ವಿಟ್ಟರ್ ಖಾತೆಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ.
P&T ಕಾಲೊನಿಯಲ್ಲಿರುವ ರೈಲ್ವೆ ಅಂಡರ್ ಪಾಸ್ ಚಿತ್ರ