SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 11, 2025
ಅಹಮದಾಬಾದ್ | 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಅಹಮದಾಬಾದ್‌ನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. 8 ವರ್ಷದ ಗಾರ್ಗಿ ರನ್‌ಪಾರ ಮೃತ ಬಾಲಕಿಯಾಗಿದ್ದಾರೆ.
ವಿಡಿಯೋದಲ್ಲಿರುವಂತೆ ಅಹಮದಾಬಾದ್‌ನ ಜಿಬಾರ ಶಾಲೆಯಲ್ಲಿ 3 ನೇ ತರಗತಿ ಓದುತ್ತಿದ್ದ ಗಾರ್ಗಿ ರನ್ ಪಾರ ಎಂಬ ಬಾಲಕಿ ಶಾಲೆಯ ಒಳಗೆ ನಡೆದು ಕೊಂಡು ಹೋಗುತ್ತಿರುತ್ತಾರೆ ಆ ಸಮಯದಲ್ಲಿ ಒಮ್ಮೆಲೆ ಆಕೆಗೆ ಎದೆನೋವು ಕಾಣಿಸಿಕೊಂಡಿದೆ. ಅದರಿಂದಾಗಿ ಅಕೆ ಅಲ್ಲೇ ಪಕ್ಕದಲ್ಲಿರುವ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಶಿಕ್ಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಆದರೆ ದುರಾದೃಷ್ಟಶಾತ್ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾರೆ.
https://x.com/i/status/1877729027764400311
SUMMARY | In a heart-rending incident, a class 8 student died of a heart attack in Ahmedabad, a video of which has gone viral. The deceased has been identified as 8-year-old Gargi Ranpara.
KEYWORDS | student died, heart attack, Ahmedabad,