SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 |
33 ವರ್ಷಗಳ ಹಿಂದೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು 1991 ರಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣದಲ್ಲಿ 33 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ತಂಡವು ಆರೋಪಿಯನ್ನ ಪತ್ತೆ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿದೆ. ಸಿಬ್ಬಂದಿಗಳ ಕೆಲಸಕ್ಕೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕಡೂರು ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಪತ್ತೆ
ಚಿಕ್ಕಮಗಳೂರು ಜಿಲ್ಲೆ ಕಡೂರು ರೈಲ್ವೆ ನಿಲ್ದಾಣದಲ್ಲಿ ದಿನಾಂಕ : 28-09-2024 ರಂದು ರಾತ್ರಿ ಅಪ್ರಾಪ್ತೆಯೊಬ್ಬಳನ್ನ ಬೀರೂರು ರೈಲ್ವೆ ಪೊಲೀಸ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಆಕೆಯನ್ನು ರಕ್ಷಣೆ ಮಾಡಿದ ಸಿಬ್ಬಂದಿ ಅಪ್ರಾಪ್ತೆಯ ಸುರಕ್ಷತೆಯ ಸಲುವಾಗಿ ಮಹಿಳಾ ಕಲ್ಯಾಣ ಸಮಿತಿಯವರ ಸುಪರ್ಧಿಗೆ ಆಕೆಯನ್ನು ಒಪ್ಪಿಸಿರುತ್ತಾರೆ.
2 ಪ್ರತ್ಯೇಕ ಪ್ರಕರಣ, 18 ಜನರ ವಿರುದ್ಧ ಕೇಸ್
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ & ಹೊಸನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ 2 ಕಡೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಜೂಟಾಟದಲ್ಲಿ ಪಣವಾಗಿಟ್ಟಿದ್ದ 30,000/- ರೂ ವಶಕ್ಕೆ ಪಡೆದು ಒಟ್ಟು 18 ಜನರ ವಿರುದ್ಧ KP ಕಾಯ್ದೆ ಅಡಿಯಲ್ಲಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕ್ರಮಕೈಗೊಂಡಿದ್ದಾರೆ.