SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA DASARA | ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಇವತ್ತು ಇಡ್ಲಿ ಸಾಂಬಾರ್ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶಿವಪ್ಪನಾಯಕ ಪ್ರತಿಮೆ ಬಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ನಿಮಿಷದಲ್ಲಿ ಅಣ್ಣಾನಗರದ ಶಿವಮ್ಮ 10 ಇಡ್ಡಿ ತಿಂದು ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಇವರು ಈ ಸ್ಪರ್ಧೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದಿದ್ದಾರೆ. ಈ ಹಿಂದೆ ಮುದ್ದೆ, ಕಡುಬು ತಿಂದು ಗೆಲವು ಕಂಡಿದ್ದರು. 8 ಇಡ್ಲಿ ತಿಂದ ಧನಲಕ್ಷ್ಮಿ ಎರಡನೇ ಸ್ಥಾನ, 6½ ಇಡ್ಲಿ ತಿಂದ ರಾಜಲಕ್ಷ್ಮೀ ಮೂರನೇ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ 11½ ಇಡ್ಲಿ ತಿಂದ ಪ್ರವೀಣ್ ಕುಮಾರ್ ಮೊದಲ ಬಹುಮಾನ ಪಡೆದರೆ, 11 ಇಡ್ಲಿ ತಿಂದ ರವಿಕಿರಣ್ ಗೆ ದ್ವಿತೀಯ ಬಹುಮಾನ ಲಭಿಸಿದೆ.
ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿಗೆ ಬಾಳೆಹಣ್ಣೂ ತಿನ್ನುವ ಸ್ಪರ್ಧೆಯನ್ನ ನಡೆಸಲಾಗಿತ್ತು. 15 ಮಂದಿ ಮಹಿಳಾ ಸಿಬ್ಬಂದಿ ಪೈಕಿ ಮಂಜುಳಾ ಮೊದಲ ಬಹುಮಾನ ಗೆದ್ದಿದ್ದಾರೆ. ಪುರುಷರ ವಿಭಾಗದಲ್ಲಿ ಪ್ರಸನ್ನಕುಮಾರ್ 9 ಬಾಳೆಹಣ್ಣು ತಿಂದು ಬಹುಮಾನ ಗೆದ್ದರು.
SUMMARY | As part of Shivamogga Dasara, idli sambar eating competition was organised
KEYWORDS | As part of Shivamogga Dasara, idli sambar eating competition