SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024
ಭದ್ರಾವತಿ | ಶಿವಮೊಗ್ಗ ಪೊಲೀಸರು ಮತ್ತೊಮ್ಮೆ, ಜೀವ ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸೊರಬದಲ್ಲಿ ಸಾಯಲು ಹೊಳೆಗೆ ಹಾರಲು ಮುಂದಾಗಿದ್ದ ಮಹಿಳೆ ಹಾಗೂ ಆಕೆಯ ಮಕ್ಕಳನ್ನ ರಕ್ಷಿಸಿದ್ದರು.
ಇದೀಗ ಅಂತಹುದ್ದೆ ಒಂದು ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ತಾಲ್ಲೂಕು , ಭದ್ರಾವತಿ ನಗರದ ನ್ಯೂ ಬ್ರಿಡ್ಜ್ ಬಳಿಯಲ್ಲಿ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನ ಕಂಡು ಸ್ಥಳೀಯರು ಶಿವಮೊಗ್ಗ ಪೊಲೀಸ್ ERSS112 ಸಹಾಯವಾಣಿಗೆ ಕರೆ ಮಾಡಿದ್ದರು.
ತಕ್ಷಣವೇ ವಿಷಯ ತಿಳಿದು ಸ್ಥಳಕ್ಕೆ ಬರುವ ಹೊತ್ತಿಗಾಗಲೇ ಅಲ್ಲಿದ್ದ ಸ್ಥಳೀಯರು ಹೊಳೆಗೆ ಇಳಿದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದರು. ಅವರಿಗೆ ಜೊತೆಯಾದ ಪೊಲೀಸರು ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ.
ಆಕೆಯನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದ ಮೇಲೆ ನಂತರ ಮಹಿಳೆಯನ್ನು ವಿಚಾರ ಮಾಡಿದ್ದಾರೆ. ಆ ಸಂದರ್ಭದಲ್ಲಿ ಆಕೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೊಳೆಗೆ ಹಾರಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ಕೌಟುಂಬಿಕ ಸಮಸ್ಯೆಯೆ ಕಾರಣ ಎಂದಿದ್ದಾರೆ.
ಈ ಬಳಿಕ ಸ್ಟೇಷನ್ಗೆ ಮಹಿಳೆಯನ್ನ ಕರೆದೊಯ್ದು ಅವರ ವಿಚಾರಣೆ ಕೈಗೊಂಡ ಪೊಲೀಸರು ಮಹಿಳೆಗೆ ಸಾಧ್ಯವಾಗುವ ಸಹಾಯ ಮಾಡಿದ್ದಾರೆ.ಇನ್ನೂ ಈ ವಿಚಾರಕ್ಕೆ ಎಕ್ಸ್ ಅಕೌಂಟ್ನಲ್ಲಿ ಪ್ರತಿಕ್ರಿಯಿಸಿರುವ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ERV ಸಿಬ್ಬಂದಿ ಬಿನೇಶ್, ಸಿಪಿಸಿ ಹೊಸಮನೆ ಪೊಲೀಸ್ ಠಾಣೆ & ಚಾಲಕರಾದ ಶಿವಶರಣ, ಎಹೆಚ್ಸಿ ಡಿಎಆರ್ ಶಿವಮೊಗ್ಗ ರವರ ಕೆಲಸವನ್ನ ಪ್ರಶಂಸಿದ್ದಾರೆ.
SUMMARY | Bhadravathi 112 police personnel rescued a woman who was trying to commit suicide near Newbridge.
KEYWORDS | Bhadravathi 112 police, rescued a woman, commit suicide ,near Newbridge