SHIVAMOGGA | MALENADUTODAY NEWS | ಮಲೆನಾಡು ಟುಡೆ Feb 1, 2025
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಬಜೆಟ್ ಮಂಡನೆಯ ವೇಳೆಯಲ್ಲಿ ಗರಿಷ್ಟ ವಾರ್ಷಿಕ ಆದಾಯ 12 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಕೇವಲ ಇದೊಂದು ಸಾಲಿಗೆ ಆದಾಯ ತೆರಿಗೆ ಅಥವಾ ಇನ್‌ಕಮ್ ಟ್ಯಾಕ್ಸ ಅರ್ಥವಾಗುವುದಿಲ್ಲ. ಏನಿದು ಇದರ ಲಾಭ ಎಷ್ಟು? ಹೇಗೆ ಟ್ಯಾಕ್ಸ್ ಲೆಕ್ಕ ಯಾವ ರೀತಿಯಲ್ಲಿ ಹಾಕಲಾಗುತ್ತದೆ ಎಂಬದನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಲೆನಾಡು ಟುಡೆಯಿಂದ ನಿಮ್ಮ ಮುಂದೆ
12 ಲಕ್ಷ ರೂಪಾಯಿವರೆಗೂ ಟ್ಯಾಕ್ಸ್ ಇಲ್ಲ
ಅಂದರೆ, ಒಬ್ಬ ವ್ಯಕ್ತಿ ಅಥವಾ ನೌಕರ ಆರ್ಥಿಕ ವರ್ಷದಲ್ಲಿ ಆತ ಸರ್ಕಾರಕ್ಕೆ ತನ್ನ ಆದಾಯದಲ್ಲಿ ನಯಾಪೈಸೆ ತೆರಿಗೆ ಕಟ್ಟದೇನೆ 12 ಲಕ್ಷ ರೂಪಾಯಿವರೆಗೂ ಸಂಪಾದಿಸಬಹುದು. ಅಥವಾ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ 12 ಲಕ್ಷ ರೂಪಾಯಿವರೆಗೂ ತನ್ನ ಆದಾಯ ಇದೆ ತೋರಿಸಿಕೊಳ್ಳಬಹುದು. ನೌಕರರಿಗೆ ಇಡಿಗಂಟು ರೂಪದ ಅಂದರೆ ಒಂದಷ್ಟು ತೆರಿಗೆ ಎಂಬ ರೀತಿಯ ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ಕಟ್ಟಾಗುತ್ತಿತ್ತು. ಆದರೆ ನೌಕರರಿಗೆ ಇದರ ಲಾಭವೂ ಸೇರಿ ಒಟ್ಟು 12.75 ಲಕ್ಷ ರೂಪಾಯಿ ಆದಾಯದವರೆಗೂ ಟ್ಯಾಕ್ಸ್ ಬೀಳುವುದಿಲ್ಲ. ಆದಾಗ್ಯು ಇದಕ್ಕಾಗಿ ಇದಕ್ಕಾಗಿ income tax return ಫೈಲ್ ಮಾಡಬೇಕಾಗುತ್ತದೆ.
ಹೊಸ ಟ್ಯಾಕ್ಸ್ ನೀತಿಯಿಂದ ಹೇಗೆ ಲಾಭ
ಕೇಂದ್ರ ಸರ್ಕಾರ, ಕಡಿಮೆ ಆದಾಯ ಹೊಂದಿರುವವರಿಗೆ ಇನ್‌ಕಮ್ ಟ್ಯಾಕ್ಸ್‌ನಿಂದ ವಿನಾಯಿತಿ ನೀಡುವ ಸಲುವಾಗಿ 87A of the Income-tax Act, 1961 (Act’) ನಲ್ಲಿ ಒಂದಷ್ಟು ವಿನಾಯಿತಿ ನೀಡುತ್ತಿದೆ. ಈ ವರ್ಷ 87a ಅಡಿಯಲ್ಲಿ ನೀಡಲಾಗುವ ಟ್ಯಾಕ್ಸ್ ರಿಬೇಟ್ ಅಥವಾ ತೆರಿಗೆಯಲ್ಲಿ ಕಡಿತಗೊಳ್ಳುವ ಗರಿಷ್ಟ ಮೊತ್ತವನ್ನು 60 ಸಾವಿರಕ್ಕೆ ವಿತ್ತ ಸಚಿವೆ ಹೆಚ್ಚಿಸಿದ್ದಾರೆ. ಈ ಮೊದಲು ಈ ಮೊತ್ತ 12500 ರಷ್ಟಿತ್ತು.
ಕೇಂದ್ರ ಸರ್ಕಾರ 87 ಎ ಟ್ಯಾಕ್ಸ್ ಡಿಬೇಟ್ ಮೊತ್ತ ಹೆಚ್ಚಿಸಿರುವ ಕಾರಣಕ್ಕೆ ಗರಿಷ್ಟ 12 ಲಕ್ಷ ಹಾಗೂ ನೌಕರರಿಗೆ ಅನ್ವಯವಾಗುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮೈನಸ್ ಆಗಿ ಗರಿಷ್ಟ 12.70 ಲಕ್ಷ ನೋ ಟ್ಯಾಕ್ಸ್ ಲಿಮಿಟ್‌ನಲ್ಲಿ ಬರುತ್ತದೆ. ಹಾಗಾಗಿ ವರ್ಷಕ್ಕೆ ಇಷ್ಟು ಆದಾಯಹೊಂದಿದವರು ಒಂದು ರೂಪಾಯಿನೂ ಟ್ಯಾಕ್ಸ್ ಕಟ್ಟಂಗಿಲ್ಲ. ಇದಕ್ಕೂ ಮೀರಿದ ಆದಾಯ ಹೊಂದಿರುವವರು ಅಥವಾ ತೋರಿಸುವವರು ಮಾತ್ರ tax slab calculator 2025 ಹಿಡಿದು ಎಷ್ಟು ಕಟ್ಟಬೇಕು ಎಂದು ಲೆಕ್ಕ ಹಾಕಬೇಕಾಗುತ್ತದೆ. ಆದಾಗ್ಯು ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಇಲ್ಲಿ ಮುಖ್ಯ ಅಂಶ
ಆದಾಯ ತೆರಿಗೆ ಸ್ಲ್ಯಾಬ್ / income tax slab new
ಆದಾಯ ತೆರಿಗೆ ವಿನಾಯಿತಿ 12 ಲಕ್ಷದವರೆಗೂ ವಿಸ್ತರಣೆಯಾದರೂ ಎಷ್ಟು ಲಕ್ಷ ಆದಾಯಕ್ಕೆ ಎಷ್ಟು ಲಕ್ಷ ಟ್ಯಾಕ್ಸ್ ಎಂಬ ವಿವರಣೆ ಏಕೆ? ಹೊಸ ತೆರಿಗೆ ಸ್ಲ್ಯಾಬ್ ಅಥವಾ ಹಂತಗಳಲ್ಲಿ ನಾಲ್ಕು ಲಕ್ಷರೂಪಾಯಿವರೆಗೂ ಟ್ಯಾಕ್ಸ್ ಇಲ್ಲ ಎಂದು ಹೇಳಲಾಗಿದೆಯೆಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಸದ್ಯ ವಿತ್ತಸಚಿವೆ ಬಜೆಟ್‌ನ ಪ್ರಕಾರ, ತೆರಿಗೆ ಸ್ಲ್ಯಾಬ್‌ನ ವಿವರ ಹೀಗಿದೆ.
income tax slab new
ಆದಾಯ 0-4 ಲಕ್ಷ ರೂಪಾಯಿ | ತೆರಿಗೆ ಇಲ್ಲ
ಆದಾಯ 4-8 ಲಕ್ಷ ರೂಪಾಯಿ | ಶೇಕಡಾ 5ರಷ್ಟು ತೆರಿಗೆ
ಆದಾಯ 8-12 ಲಕ್ಷ ರೂಪಾಯಿ | ಶೇಕಡಾ 10ರಷ್ಟು ತೆರಿಗೆ
ಆದಾಯ 12-16 ಲಕ್ಷ ರೂಪಾಯಿ | ಶೇಕಡಾ 15ರಷ್ಟು ತೆರಿಗೆ
ಆದಾಯ 16-20 ಲಕ್ಷ ರೂಪಾಯಿ | ಶೇಕಡಾ 20ರಷ್ಟು ತೆರಿಗೆ
ಆದಾಯ 20-24 ಲಕ್ಷ ರೂಪಾಯಿ | ಶೇಕಡಾ 25ರಷ್ಟು ತೆರಿಗೆ
ಆದಾಯ 24 ಲಕ್ಷ ಮೇಲ್ಪಟ್ಟು | ಶೇಕಡಾ 30ರಷ್ಟು ತೆರಿಗೆ
ಟ್ಯಾಕ್ಸ್ ಎಷ್ಟು ಕಟ್ಟಬೇಕು?
ಮೇಲಿನ ಪಟ್ಟಿಯನ್ನು ಅರ್ಥ ಮಾಡಿಕೊಂಡು ಹೇಳುವುದಾದರೆ, ಗಣೇಶ ಎಂಬಾತನ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಇದೆ ಎಂದಿಟ್ಟುಕೊಳ್ಳೋಣ.
ಈ 12 ಲಕ್ಷ ರೂಪಾಯಿ ವರಮಾನದಲ್ಲಿ ಮೇಲಿನ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ, ನಾಲ್ಕು ಲಕ್ಷ ರೂಪಾಯಿಗೆ ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾಗಿ ಉಳಿದ 8 ಲಕ್ಷ ರೂಪಾಯಿ ಟ್ಯಾಕ್ಸ್ ಲೆಕ್ಕಕ್ಕೆ ಬರುತ್ತದೆ.
ಮೊದಲ ನಾಲ್ಕು ಲಕ್ಷ ರೂಪಾಯಿ ಆದಾಯವನ್ನು ಕೈ ಬಿಟ್ಟು, ನಾಲ್ಕರಿಂದ ಎಂಟು ಲಕ್ಷ ರೂಪಾಯಿವರೆಗೂ ಆದಾಯಕ್ಕೆ ಶೇಕಡಾ 5 ರಷ್ಟು ಟ್ಯಾಕ್ಸ್ ಬೀಳುತ್ತದೆ. ಅಂದರೆ ಇಲ್ಲಿ ಆದಾಯ ತೆರಿಗೆ ವರಮಾನ ಲೆಕ್ಕ ಹಾಕುವಾಗ 12 ಲಕ್ಷದ ವರಮಾನವನ್ನು 1ರಿಂದ 4 ಲಕ್ಷ , 4 ರಿಂದ 8 ಲಕ್ಷ, 8 ರಿಂದ 12 ಲಕ್ಷ ಎಂದು ತೆರಿಗೆ ಸ್ಲ್ಯಾಬ್ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಮೈನಸ್ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ನೋಡುವುದಾಯ್ತು ಎಂದರೆ, ಗಣೇಶನ ಮೊದಲ ಹಂತದ ನಾಲ್ಕು ಲಕ್ಷ ಗಳಿಕೆಗೆ ಟ್ಯಾಕ್ಸ್ ಇಲ್ಲವಾದರೆ, ನಂತರದ ನಾಲ್ಕು ಲಕ್ಷ (4-8 ಲಕ್ಷ) ರೂಪಾಯಿ ವರಮಾನಕ್ಕೆ 20 ಸಾವಿರ ಟ್ಯಾಕ್ಸ್ ಕಟ್ಟುವ ಅಗತ್ಯಬೀಳುತ್ತದೆ.
ನಂತರ 8 ರಿಂದ 12 ಲಕ್ಷ ರೂಪಾಯಿವರೆಗಿನ ನಾಲ್ಕು ಲಕ್ಷ ರೂಪಾಯಿಯ ವರಮಾನಕ್ಕೆ ಸ್ಲ್ಯಾಬ್ ಪ್ರಕಾರ,ಶೆಕಡಾ ಹತ್ತರಷ್ಟು ಟ್ಯಾಕ್ಸ್ ಅಂದರೆ, 40000 ರೂಪಾಯಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ಒಟ್ಟಾರೆ ಟ್ಯಾಕ್ಸ್‌ನ ಮೊತ್ತ 40000+20000 ಸೇರಿ ಒಟ್ಟು 60000 ಸಾವಿರ ರೂಪಾಯಿ ಆಗುತ್ತದೆ. ಇಷ್ಟು ಟ್ಯಾಕ್ಸ್ ಕಟ್ಟುವುದಕ್ಕೆ ಬದಲಾಗಿ ಗಣೇಶನು 87ಎ ವಿನಾಯಿತಿಯನ್ನು ಕ್ಲೈಮ್ ಮಾಡಿಕೊಳ್ಳುತ್ತಾನೆ. ಸರ್ಕಾರವೇ ಹೇಳಿದಂತೆ ಗರಿಷ್ಟ 60 ಸಾವಿರ ರೂಪಾಯಿ ತೆರಿಗೆ ಹಣವನ್ನು ವಿನಾಯಿತಿ ರೂಪದಲ್ಲಿ ಮನ್ನಾ ಮಾಡುತ್ತದೆ ಅಥವಾ ಕಟ್ಟುವುದು ಬೇಡ ಎಂದಿದೆ. ಹೀಗಾಗಿ 12 ಲಕ್ಷ ರೂಪಾಯಿವರೆಗಿನ ಆದಾಯ ಹೊಂದಿರುವವರು ಟ್ಸ್ಯಾಕ್ಸ್ ಕಟ್ಟುವ ಅವಶ್ಯಕತೆ ಬರುವುದಿಲ್ಲ, ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿ , 87 ಎ ಕ್ಲೈಮ್ ಮಾಡಿದಲ್ಲಿ ನಿಮ್ಮ ತೆರಿಗೆ ಹಣ ನಿಮ್ಮ ಖಾತೆಗೆ ವಾಪಸ್ ಆಗುತ್ತದೆ.
ಇನ್ನೂ ಟ್ಯಾಕ್ಸ್ ಸ್ಲ್ಯಾಬ್‌ನಲ್ಲಿ ಹಿಂದಿನಿಂದಕ್ಕಿಂತ ಟ್ಯಾಕ್ಸ್ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆದಾರರು ಇನ್ನಷ್ಟು ಲಾಭವನ್ನು ಪಡೆಯಬಹುದು. ವಿಶೇಷ ಅಂಶ ಅಂದರೆ, ಇಲ್ಲಿನ ಮಿತಿಗಿಂತ ಒಂದು ಲಕ್ಷ ಆದಾಯ ಹೆಚ್ಚಾದರೂ ಹೆಚ್ಚುವರಿ ಟ್ಯಾಕ್ಸ್ ಸ್ಲ್ಯಾಬ್ ಅನ್ವಯವಾಗುತ್ತದೆ. ಉದಾಹರಣೆಗೆ 13 ಲಕ್ಷ ರೂಪಾಯಿ ಆದಾಯ ಹೊಂದಿದ ವ್ಯಕ್ತಿ ನಾಲ್ಕು ತೆರಿಗೆ ಸ್ಲ್ಯಾಬ್ ಅನ್ವಯವಾಗುತ್ತದೆ, 0-4,4-8,8-12,12-16 ತೆರಿಗೆ ಸ್ಲ್ಯಾಬ್‌ಗಳು ಅನ್ವಯವಾಗಿದೆ, ಲೆಕ್ಕಹಾಕಿದಾಗ ಆತ 75 ಸಾವಿರ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆದಾಗ್ಯು ತೆರಿಗೆ ಸ್ಲ್ಯಾಬ್‌ಗಳಲ್ಲಿ ತೆರಿಗೆಯ ಶೇಕಡಾವಾರು ಕಡಿಮೆಯಾದ್ದರಿಂದ ಆತನಿಗೆ 25 ಸಾವಿರ ರೂಪಾಯಿ ಈ ವರ್ಷದಿಂದ ಉಳಿಯುತ್ತದೆ. ಏಕೆಂದರೆ ಹಿಂದಿನ ಸ್ಲ್ಯಾಬ್ ಪ್ರಕಾರ ಆತ ಒಂದು ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಬೇಕಿತ್ತು.
ಅಲ್ಲದೆ 12 ಲಕ್ಷ ರೂಪಾಯಿಗೂ ಅಧಿಕ ವಾರ್ಷಿಕ ಆದಾಯ ಹೊಂದಿದವರು ಮೇಲಿನ ಟ್ಯಾಕ್ಸ್ ಸ್ಲ್ಯಾಬ್‌ಗಳ ತಕ್ಕಂತೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆ ನಿಟ್ಟಿನಲ್ಲಿ ಎಷ್ಟು ಟ್ಯಾಕ್ಸ್ ಆಗುತ್ತದೆ ಎಂಬುದರ ಪಟ್ಟಿ ಇಲ್ಲಿದೆ ನೋಡಬಹುದು
ಇದಿಷ್ಟು ಟ್ಯಾಕ್ಸ್ ಫ್ರೀ ಆದಾಯ ತೆರಿಗೆ ಮಿತಿಯ ವಿವರಣೆ, ಈ ವರದಿ ನಿಮಗೆ ಇಷ್ಟವಾದಲ್ಲಿ ಇನ್ನಷ್ಟು ಮಂದಿಗೆ ವರದಿಯನ್ನು ಹಂಚಿಕೊಳ್ಳಿ ಜೊತೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
SUMMARY | Zero Income Tax till ₹12 Lakh Income under New Tax Regime, how can calculate income tax return, no income tax till 12 lakhs, no income tax upto 12 lakhs, 80ggc deduction income tax message, no income tax upto 12 lakh, budget highlights 2025, 87a tax rebate
KEY WORDS | Zero Income Tax till ₹12 Lakh Income under New Tax Regime, how can calculate income tax return, no income tax till 12 lakhs, no income tax upto 12 lakhs, 80ggc deduction income tax message, no income tax upto 12 lakh, budget highlights 2025, 87a tax rebate