SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 17, 2025
ತೀರ್ಥಹಳ್ಳಿ ತಾಲೂಕಿನ ನಾಲೂರಿನಲ್ಲಿ ಬೀಕರ ಅಪಘಾತ ಸಂಭವಿಸಿದ್ದು, ಅಪಾಚೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
25 ವರ್ಷದ ಗಣೇಶ ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ. ಹರಪ್ಪನಹಳ್ಳಿಯ ನಿವಾಸಿಯಾದ ಗಣೇಶ್ ಉಡುಪಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಕೆಲಸದ ಸಲುವಾಗಿ ಊರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿದೆ. ಬೈಕ್ ಸವಾರನಿಗೆ ಗುದ್ದಿದ ವಾಹನ ಯಾವುದೆಂದು ತಿಳಿದು ಬಂದಿಲ್ಲ. ಅಪಘಾತವಾದ ಸ್ಥಳದಲ್ಲಿ ಮೃತ ಬೈಕ್ ಸವಾರನ ಮೊಬೈಲ್ ಪತೆಯಾಗಿದ್ದು,ಆ ಫೋನ್‌ನಿಂದ ಪೊಲೀಸರು ಮೃತನ ಮನೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಹಾಗೆಯೇ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
SUMMARY | The accident took place at Naluru in Theerthahalli taluk and the bike rider was killed on the spot.
KEYWORDS | accident, Naluru, spot death,