SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024
ಮಲೆನಾಡಿನ ಭೂಮಿ ಹಕ್ಕಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಸಾಗರ ತಾಲ್ಲೂಕನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ನಮ್ಮ ನಡಿಗೆ ಲಿಂಗನಮಕ್ಕಿ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಸಾಗರ ಏಸಿ ಕಚೇರಿಯಿಂದ ರೈತರು ಹಾರೆ ಗುದ್ದಲಿಯೊಂದು ಮೆರವಣಿಗೆ ಹೊರಡಲು ಸಿದ್ಧರಾಗಿದ್ದಾರೆ.
ಪಾದಯಾತ್ರೆ ಹಮ್ಮಿಕೊಂಡಿರುವ ರೈತರು ಡ್ಯಾಮ್ ಒಡೆದಾದರೂ ಪರವಾಗಿಲ್ಲ, ಭೂಮಿಯ ಹಕ್ಕನ್ನ ಪಡೆದುಕೊಳ್ಳುತ್ತೇವೆ ಎಂದು ಘೋಷಣೆಗಳನ್ನ ಕೂಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಡಾ. ಗಣಪತಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಇದಾಗಿದ್ದು ಇವತ್ತು ಕೂಡ ಪ್ರತಿಭಟನೆ ಮುಂದುವರಿದಿದೆ.
ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಂತೆ ಪಟ್ಟು ಹಿಡಿದಿರುವ ರೈತರು ಅಹೋರಾತ್ರಿ ಹೋರಾಟ ನಡೆಸ್ತಿದ್ದಾರೆ. ಈ ನಡುವೆ ಪ್ರತಿಭಟನಾಕಾರರನ್ನ ಸಮಾಧಾನಗೊಳಿಸುವ ಪ್ರಯತ್ನ ಕೂಡ ವಿಫಲವಾಗಿದೆ.
SUMMARY | In front of the office of the Sub-Divisional Officer of Sagar, Shivamogga district, indefinite sit-in protest is being organised by the District Raitha Sangha Malnad Farmers’ Action Committee, Joint Forum of Flood Victims and Land Rights Victims.
KEYWORDS | Sub-Divisional Officer of Sagar, Shivamogga district, District Raitha Sangha, Malnad Farmers Action Committee, Joint Forum of Flood Victims and Land Rights Victims,